Widgets Magazine

ಮಾರುಕಟ್ಟೆಗೆ ಹೊಚ್ಚ ಹೊಸ ಹೋಂಡಾ ಸಿಟಿ

New Delhi| Rajendra| Last Modified ಬುಧವಾರ, 15 ಫೆಬ್ರವರಿ 2017 (10:48 IST)
ಜಪಾನ್ ಕಾರು ತಯಾರಿಕಾ ಕಂಪೆನಿ ಹೋಂಡಾ ಸಿಟಿ ಹೊಚ್ಚ ಹೊಸ ಆವೃತ್ತಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.8,49,990 (ದೆಹಲಿ ಎಕ್ಸ್‌ಶೋ ರೂಂ ಬೆಲೆ) ಎಂದು ನಿಗದಿಪಡಿಸಿದೆ. 2014ರಲ್ಲಿ ಹೋಂಡಾ ಸಿಟಿ ಕಾರನ್ನು ಅಪ್‍ಡೇಟ್ ಮಾಡಿದ ಬಳಿಕ ಮತ್ತೆ ಹೊಸ ಆವೃತ್ತಿ ಬಿಡುಗಡೆಯಾಗುತ್ತಿರುವುದು ಇದೇ ಮೊದಲು.

ಹೊಸ ಆವೃತ್ತಿಯಲ್ಲಿ ಮುಂಭಾಗ ಕೆಲವು ಬದಲಾವಣೆಗಳನ್ನು ಮಾಡಲಾಗಿದೆ. ಹೊಚ್ಚಹೊಸ ಎಲ್ಇಡಿ ಲೈಟ್ಸ್, ಎಲ್ಇಡಿ ಡಿಆರ್‌ಎಲ್, ಕಾರಿನ ಮುಂದಿನ ಬಂಪರ್ ಬದಲಾಯಿಸಲಾಗಿದೆ. ಏಳು ಇಂಚಿನ ಟಚ್ ಸ್ಕ್ರೀನ್ ಆಡಿಯೋ, ವಿಜುವಲ್ ನೇವಿಗೇಷನ್ ಸಿಸ್ಟಂ, ಹಿಂಬದಿ ನೋಡಬಹುದಾದ ಕ್ಯಾಮೆರಾ, ಎಲೆಕ್ಟ್ರಿಕ್ ಸನ್‌ರೂಫ್, ಎರಡು ಯುಎಸ್‍ಬಿ ಸ್ಲಾಟ್, ಎರಡು ಮೈಕ್ರೋ ಎಸ್‍ಡಿ ಸ್ಲಾಟ್ ಇದೆ.

ಹೈ ಮೌಂಟೆಡ್ ಸ್ಟಾಪ್ ಲ್ಯಾಂಪ್ ಇರುವ ಸ್ಪಾಯಿಲರ್ ಅಳವಡಿಸಲಾಗಿದೆ. ಎರಡು ಏರ್‌ಬ್ಯಾಗ್‌ಗಳು, ಎಬಿಎಸ್, ಇಬಿಡಿ, ಸೀಟಿಗೆ ಐಎಸ್‍ಓ ಫಿಕ್ಸ್ ಇವೆ. ಟಾಪ್ ಎಂಡ್ ಕಾರಿನಲ್ಲಿ ಆರು ಏರ್‌ಬ್ಯಾಗ್‌ಗಳನ್ನು ನೀಡಲಾಗಿದೆ. ಆಟೋಮ್ಯಾಟಿಕ್ ಹೆಡ್‍ಲ್ಯಾಂಪ್ಸ್, ಆಟೋಮೆಟಿಕ್ ರೈನ್ ಸೆನ್ಸ್ ವೈಪರ್ಸ್ ಇದಕ್ಕೆ ನೀಡಲಾಗಿದೆ. ಡೀಸೆಲ್ ಆವೃತ್ತಿ ಮೈಲೇಜು 25.6 ಕಿ.ಮೀ, ಪೆಟ್ರೋಲ್ ಆವೃತ್ತಿ 17.4 ಕಿ.ಮೀ ಮೈಲೇಜ್ ನೀಡುತ್ತದೆ ಎಂದು ಕಂಪೆನಿ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :