Widgets Magazine

ವಿಶ್ವದ ಮೊದಲ ನೆವರ್‌ ಸ್ಟಾಪ್ ಲೇಸರ್ ಟ್ಯಾಂಕ್ ಪ್ರಿಂಟರ್ ಅನ್ನು ಪರಿಚಯಿಸಿದ HP

ನವದೆಹಲಿ| pavithra| Last Modified ಶುಕ್ರವಾರ, 5 ಜುಲೈ 2019 (09:01 IST)
ನವದೆಹಲಿ : ಭಾರತದ ವ್ಯವಹಾರಗಳಿಗೆ ಸೂಕ್ತವಾದ ಸ್ಮಾರ್ಟ್ ಪ್ರಿಂಟಿಂಗ್ ತಂತ್ರಜ್ಞಾನವನ್ನು ನೀಡಲು ಪ್ರಿಂಟರ್ ಸಂಬಂಧಿತ ಉತ್ಪನ್ನಗಳ ತಯಾರಿಕೆಯಲ್ಲಿ ಮೊದಲ ಸ್ಥಾನದಲ್ಲಿರುವ ಎಚ್.ಪಿ. ವಿಶ್ವದ ಮೊದಲ ನೆವರ್‌ ಸ್ಟಾಪ್ ಲೇಸರ್ ಟ್ಯಾಂಕ್ ಪ್ರಿಂಟರ್ ಅನ್ನು ಪರಿಚಯಿಸಿದೆ.ಸಣ್ಣ ಹಾಗೂ ಮಧ್ಯಮ ವ್ಯವಹಾರಗಳಿಗೆ ಬಳಸಲು ವಿನ್ಯಾಸಗೊಳಿಸಲಾದ ನೆವರ್‌ಸ್ಟಾಪ್ ಲೇಸರ್ ಪ್ರಿಂಟರ್ 20ಪಿಪಿಎಂ(ಎ4)ನಷ್ಟು ವೇಗವನ್ನು  ಹೊಂದಿದೆ. ಈ ಮುದ್ರಕದಲ್ಲಿ ಟೋನರ್  ಅನ್ನು 15 ಸೆಕೆಂಡ್‌ಗಳಲ್ಲಿ ಬದಲಿಸುವ ಆಯ್ಕೆಯಿದ್ದು, ಇದರಲ್ಲಿ ಸಿಂಗಲ್ ಮತ್ತು ಡ್ಯುಯಲ್ ಲೇಸರ್ ಟೋನರ್ ರೀಲೋಡ್ ಕಿಟ್‍ಗಳು ಇವೆ. ಇದರಲ್ಲಿ 5,000 ಪುಟಗಳವರೆಗೆ ಪ್ರಿಂಟ್ ಪಡೆಯಬಹುದು. ಡ್ಯುಯಲ್ ಲೇಸರ್ ಟೋನರ್ ರೀಲೋಡ್ ಕಿಟ್ ಬಳಕೆದಾರರಿಗೆ ಒಂದು ಪುಟ ಪ್ರಿಂಟ್ ತೆಗೆಯಲು 29 ಪೈಸೆ ಖರ್ಚು ಬರುತ್ತದೆ. ಈ ಸ್ಮಾರ್ಟ್‌ ಪ್ರಿಂಟಿಂಗ್ ತಂತ್ರಜ್ಞಾನ ಮುದ್ರಣದ ವೆಚ್ಚವನ್ನು ಕಡಿಮೆ ಮಾಡುvudlfldE ಹೆಚ್ಚು ಸಮಯವನ್ನು ಉಳಿತಾಯ ಮಾಡಲಿದೆ. ಇದನ್ನು ಮೊಬೈಲ್‍ ಗೂ ಸಹ ಕನೆಕ್ಟ್ ಮಾಡಬಹುದಾಗಿದೆ.

 

ಎಚ್‍ಪಿ ನೆವರ್‌ಸ್ಟಾಪ್ ಲೇಸರ್ 1000 ಸರಣಿ 15,846 ರೂ. (ನಾನ್-ವೈರ್‍ಲೆಸ್) ಮತ್ತು 17,236 ರೂ.(ವೈರ್‍ಲೆಸ್).
ಎಚ್‍ಪಿ ನೆವರ್‌ಸ್ಟಾಪ್ ಲೇಸರ್ ಎಂಎಫ್‍ಪಿ 1200 ಸರಣಿ 22,057 ರೂ.(ನಾನ್-ವೈರ್‍ಲೆಸ್) ಮತ್ತು 23,460 ರೂ.(ವೈರ್‍ಲೆಸ್).
ಎಚ್‍ಪಿ ನೆವರ್‌ಸ್ಟಾಪ್ ಲೇಸರ್ ಟೋನರ್ ರೀಲೋಡ್ ಕಿಟ್ 849 ರೂ.(ಸಿಂಗಲ್ ಪ್ಯಾಕ್) ಮತ್ತು 1449 ರೂ. (ಡಬಲ್ ಪ್ಯಾಕ್).

 
ಇದರಲ್ಲಿ ಇನ್ನಷ್ಟು ಓದಿ :