Widgets Magazine

ಭಾರತದ ಮಾರುಕಟ್ಟೆಗೆ ಐಬಾಲ್‌ ಟ್ಯಾಬ್ಲೆಟ್

New Delhi| Rajendra| Last Modified ಬುಧವಾರ, 25 ಜನವರಿ 2017 (10:55 IST)
ಪ್ರಮುಖ ಸ್ಮಾರ್ಟ್‌ಫೋನ್ ತಯಾರಿ ಕಂಪೆನಿ ಐಬಾಲ್‌ನಿಂದ ಸ್ಲೈಡ್ ನಿಂಬಲ್ 4ಜಿಎಫ್ ಹೆಸರಿನ ಟ್ಯಾಬ್ಲೆಟ್ ಮಂಗಳವಾರ ಭಾರತದ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. 4ಜಿ ವೋಲ್ಟ್ ಸೌಲಭ್ಯವುಳ್ಳ ಇದರ ಬೆಲೆ ರೂ.9,999 ಎಂದು ಕಂಪೆನಿ ನಿರ್ಧರಿಸಿದೆ.

ಎಲ್ಲಾ ರೀಟೇಲ್ ಮಳಿಗೆಗಳಲ್ಲಿ ಈ ಫೋನ್ ಲಭ್ಯವಾಗಲಿದೆ. ರೋಸ್ ಗೋಲ್ಡ್ ಬಣ್ಣ ಹೊಂದಿರುವ ಈ ಟ್ಯಾಬ್ಲೆಟ್‌‍ನಲ್ಲಿ ಎಂಎಸ್ ಆಫೀಸ್ ಸೌಲಭ್ಯವೂ ಇದೆ. ಒಟ್ಟು 21 ಭಾರತೀಯ ಭಾಷೆಗಳನ್ನು ಬೆಂಬಲಿಸಲಿದೆ ಈ ಟ್ಯಾಬ್ಲೆಟ್.

ಐಬಾಲ್ ಸ್ಲೈಡ್ ನಿಂಬಲ್ 4ಜಿಎಫ್ ವಿಶೇಷಗಳು
* 8 ಇಂಚಿನ ಸ್ಪರ್ಶ ಸಂವೇದಿ ಪರದೆ
* 1.3 ಗಿಗಾ ಹಡ್ಜ್ ಕೋರ್ಟೆಕ್ಸ್
ಕ್ವಾಡ್‌ಕೋರ್ ಪ್ರೋಸೆಸರ್
* 3ಜಿಬಿ ರ‍್ಯಾಮ್
* 16 ಜಿಬಿ ಆಂತರಿಕ ಮೆಮೊರಿ
* 5 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 2 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾ
* ಆಂಡ್ರಾಯ್ಡ್ 6.0 ಓಎಸ್
* 4300 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :