ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ ಐಡಿಯಾ ಬಿಡುಗಡೆ ಮಾಡಿದೆ ಹೊಸ ಪ್ಲಾನ್

ಬೆಂಗಳೂರು| pavithra| Last Modified ಶನಿವಾರ, 29 ಸೆಪ್ಟಂಬರ್ 2018 (15:11 IST)
ಬೆಂಗಳೂರು : ಜಿಯೋ ಹಾಗೂ ಏರ್ಟೆಲ್ ಗೆ ಸೆಡ್ಡು ಹೊಡೆಯಲು ವೊಡಾಫೋನ್ ನಡುವೆ ಒಪ್ಪಂದದೊಂದಿಗೆ ಐಡಿಯಾ ಹೊಸ ಪ್ಲಾನ್ ಬಿಡುಗಡೆ ಮಾಡಿದೆ.


ಐಡಿಯಾ ತನ್ನ ಪ್ರಿಪೇಯ್ಡ್ ಗ್ರಾಹಕರಿಗಾಗಿ 149 ರೂಪಾಯಿ ಪ್ಲಾನ್ ಶುರು ಮಾಡಿದೆ. ಇದ್ರಲ್ಲಿ ಡೇಟಾ, ವಾಯ್ಸ್ ಕಾಲಿಂಗ್ ಜೊತೆ ಎಸ್‌ಎಂಎಸ್ ಸೌಲಭ್ಯ ಸಿಗ್ತಿದೆ. ಈ ಪ್ಲಾನ್ 28 ದಿನಗಳ ವಾಲಿಡಿಟಿಯನ್ನು ಹೊಂದಿದ್ದು, ಈ ಯೋಜನೆ ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲಿ ಲಭ್ಯವಾಗಲಿದೆ.


ಐಡಿಯಾದ 149 ರೂಪಾಯಿ ಪ್ಲಾನ್ ನಲ್ಲಿ 33 ಜಿಬಿ ಡೇಟಾ, ಅನಿಯಮಿತ ವಾಯ್ಸ್ ಕಾಲಿಂಗ್, ಪ್ರತಿದಿನ 100 ಎಸ್‌ಎಂಎಸ್ ಉಚಿತವಾಗಿ ಸಿಗಲಿದೆ. ಗ್ರಾಹಕರು ದಿನಕ್ಕೆ 250 ನಿಮಿಷ ಹಾಗೂ ವಾರಕ್ಕೆ 1000 ನಿಮಿಷ ಉಚಿತವಾಗಿ ಮಾತನಾಡಬಹುದಾಗಿದೆ. ಗ್ರಾಹಕರು ಕೇವಲ 100 ನಂಬರ್ ಗಳಿಗೆ ಮಾತ್ರ ಉಚಿತ ಕರೆ ಮಾಡಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :