Widgets Magazine

1ಜಿಬಿ ಡಾಟಾ ಬೆಲೆಗೆ ಸಿಗಲಿದೆ 15ಜಿಬಿ ಡಾಟಾ

New Delhi| Rajendra| Last Modified ಮಂಗಳವಾರ, 24 ಜನವರಿ 2017 (09:10 IST)
ಪ್ರಮುಖ ಮೊಬೈಲ್ ನೆಟ್‌ವರ್ಕ್ ಸಂಸ್ಥೆ ಐಡಿಯಾ 4ಜಿ ಗ್ರಾಹಕರಿಗೆ ಹೊಸ ಅತ್ಯದ್ಭುತ ಆಫರನ್ನು ಪರಿಚಯಿಸಿದೆ. 1ಜಿಬಿ ಬೆಲೆಗೆ 15 ಜಿಬಿ ಡಾಟಾ ಕೊಡಲಿರುವುದಾಗಿ ಪ್ರಕಟಿಸಿದೆ. ಆದರೆ ಇದಕ್ಕಾಗಿ ಫ್ಲಿಕ್‌ಕಾರ್ಟ್‌ನಲ್ಲಿ ಮೊಬೈಲ್ ಖರೀದಿಸಿದ ಗ್ರಾಹಕರಿಗೆ ಮಾತ್ರ ಈ ಆಫರ್ ಅನ್ವಯವಾಗಲಿದೆ.
ಪ್ರಸ್ತುತ 4ಜಿ ಸಿಮ್ ಬಳಕೆದಾರರು, ಹೊಸ ಸಿಮ್‌ಗೆ ಅಪ್‌ಗ್ರೇಡ್ ಆಗಲಿರುವ ಬಳಕೆದಾರರು ಕೂಡ ಅರ್ಹತೆ ಇರುತ್ತದೆ. ಮಾರ್ಚ್ 31ರೊಳಗೆ ಫ್ಲಿಪ್‌ಕಾರ್ಟ್‌ನಲ್ಲಿ 4ಜಿ ಮೊಬೈಲ್ ಖರೀದಿಸಿದ ಗ್ರಾಹಕರಿಗೆ ಈ ಆಫರ್ ಸಿಗಲಿದೆ ಎಂದು ಐಡಿಯಾ ತಿಳಿಸಿದೆ.
ಈ ಹಿನ್ನೆಲೆಯಲ್ಲಿ ಫ್ಲಿಪ್‌ಕಾರ್ಟ್ ಜತೆಗೆ ಐಡಿಯಾ ಒಪ್ಪಂದ ಮಾಡಿಕೊಂಡಿದೆ. ಮೊಬೈಲ್ ಖರೀದಿಸಿದ ಬಳಿಕ ಸಾಮಾನ್ಯ 1ಜಿಬಿ ಡಾಟಾ ರೀಚಾರ್ಜ್ ಮಾಡಿಕೊಳ್ಳುವುದರಿಂದ ಉಳಿದ 15ಜಿಬಿ ಡಾಟಾ ಉಚಿತವಾಗಿ ಪಡೆಯಬಹುದು. 28 ದಿನಗಳ ಕಾಲ ಇದನ್ನು ಬಳಸಿಕೊಳ್ಳಬಹುದು. ಮಾರ್ಚ್ 31ರೊಳಗೆ ಇದನ್ನು ಮೂರು ಬಾರಿ ಮಾತ್ರ ಬಳಸಿಕೊಳ್ಳಬಹುದುದಾಗಿದೆ ಎಂದು ಕಂಪೆನಿ ಹೇಳಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್


ಇದರಲ್ಲಿ ಇನ್ನಷ್ಟು ಓದಿ :