Widgets Magazine

ವಾಟ್ಸ್ ಆಪ್ ದುರ್ಬಳಕೆ ಮಾಡಿದ್ರೆ ಜೈಲುವಾಸ

ನವದೆಹಲಿ| pavitra| Last Modified ಬುಧವಾರ, 4 ಜುಲೈ 2018 (15:59 IST)
 ವಾಟ್ಸ್ ಆಪ್ ನಲ್ಲಿ ಹರಿದಾಡುವ ಸುಳ್ಳು ಸುದ್ದಿಗಳಿಂದ ಹತ್ಯೆಗಳು ನಡೆಯುತ್ತಿದ್ದು, ಸಾಮಾಜಿಕ ಜಾಲತಾಣದ ದುರ್ಬಳಕೆಯನ್ನು ಕೇಂದ್ರ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. 
ಪ್ರಚೋದನಾಕಾರಿ ಅಂಶಗಳನ್ನು ವಾಟ್ಸ್ ಆಪ್ ಸೇರಿದಂತೆ ಹಲವು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗುತ್ತಿರುವುದು ಆತಂಕದ ವಿಷಯ ಎಂದಿರುವ ಭಾರತ ಸರ್ಕಾರ, ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಪ್ರಚೋದನಾಕಾರಿ ಅಂಶಗಳು, ಸುಳ್ಳು ಸುದ್ದಿಗಳು ವಾಟ್ಸ್ ಆಪ್ ನಲ್ಲಿ ಹಂಚಿಕೆಯಾಗುತ್ತಿರುವುದನ್ನು ಗಮನಿಸಿದೆ. 
 
ಇದರಿಂದಾಗಿ ಹತ್ಯೆ ಪ್ರಕರಣಗಳು ಹೆಚ್ಚುತ್ತಿದ್ದು,  ಸುಳ್ಳು ಸುದ್ದಿ, ಪ್ರಚೋದನಾಕಾರಿ ಸುದ್ದಿಗಳು ಪ್ರಚಾರ ಪಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ವಾಟ್ಸ್ ಆಪ್ ನ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಸಚಿವಾಲಯ ಹೇಳಿದೆ.; 
 
ಮಹರಾಷ್ಟ್ರದಲ್ಲಿ ವಾಟ್ಸ್ ಆಪ್ ನಲ್ಲಿ ವೈರಲ್ ಆಗಿದ್ದ ಮಕ್ಕಳ ಕಳ್ಳರ ಕುರಿತ ಮೆಸೇಜ್ ನ್ನು ನಂಬಿ 5 ಜನರನ್ನು ಹತ್ಯೆ ಮಾಡಲಾಗಿತ್ತು. ಇದೇ ಮಾದರಿಯ ಘಟನೆ ತ್ರಿಪುರಾದಲ್ಲೂ ನಡೆದಿತ್ತು. ಇದರಲ್ಲಿ ಇನ್ನಷ್ಟು ಓದಿ :