ಎಟಿಎಂ ವಹಿವಾಟಿನ ವೇಳೆ ಎಸ್‍.ಬಿ.ಐ.ನ ಕ್ರೆಡಿಟ್-ಡೆಬಿಟ್ ಕಾರ್ಡ್ ಗಳಲ್ಲಿ ಸಮಸ್ಯೆಯಾದರೆ ತಕ್ಷಣ ಹೀಗೆ ಮಾಡಿ

ಬೆಂಗಳೂರು, ಶನಿವಾರ, 3 ನವೆಂಬರ್ 2018 (14:46 IST)

ಬೆಂಗಳೂರು : ಎಸ್.ಬಿ.ಐ. ಗ್ರಾಹಕರಿಗೆ ಎಟಿಎಂ ನಿಂದ ಹಣ ತೆಗೆಯುವಾಗ ಕ್ರೆಡಿಟ್-ಡೆಬಿಟ್ ಕಾರ್ಡ್ ಗಳಲ್ಲಿ ಸಮಸ್ಯೆಯಾದರೆ ತಕ್ಷಣ  ಆನ್‍ ಲೈನ್‍ ನಲ್ಲಿ ದೂರು ನೀಡುವ ವ್ಯವಸ್ಥೆಯನ್ನು ಎಸ್‍.ಬಿ.ಐ. ಜಾರಿಗೆ ತಂದಿದೆ.

ಹೌದು. ಕೆಲವೊಮ್ಮೆ ಎಟಿಎಂ ನಿಂದ ಹಣ ತೆಗೆಯುವಾಗ ಕೆಲವು ಸಮಸ್ಯೆಗಳು ಎದುರಾಗುತ್ತವೆ. ಅಂತಹ ಸಂದರ್ಭದಲ್ಲಿ  ಎಸ್.ಬಿ.ಐ. ಗ್ರಾಹಕರು ಚಿಂತಿಸುವ ಅಗತ್ಯವಿಲ್ಲ.  ತಕ್ಷಣ ನಿಂತಲ್ಲಿಯೇ ಆನ್‍ ಲೈನ್‍ ನಲ್ಲಿ ದೂರು ನೀಡುವ ವ್ಯವಸ್ಥೆಯನ್ನು ಎಸ್‍.ಬಿ.ಐ. ಮಾಡಿದೆ.

 

ಗ್ರಾಹಕರು ಎಸ್‍.ಬಿ.ಐ. ವೆಬ್‍ಸೈಟ್‍ಗೆ ಹೋಗಿ ಆನ್‍ ಲೈನ್‍ ನಲ್ಲಿ ದೂರು ನೀಡುವುದು ಹೇಗೆ?

 

ಗ್ರಾಹಕರು ಎಸ್‍.ಬಿ.ಐ. ವೆಬ್‍ಸೈಟ್‍ಗೆ ಹೋಗಿ ಅಲ್ಲಿ ಕಾಣಿಸುವ ಸಿಎಂಎಸ್ ಪೋರ್ಟಲ್ ನ ನಿಗದಿತ ಜಾಗದಲ್ಲಿ ಖಾತೆ ಸಂಖ್ಯೆ, ಖಾತೆಯ ವಿಧ, ಬ್ರ್ಯಾಂಚ್ ಕೋಡ್, ಮೊಬೈಲ್ ನಂಬರ್, ಇಮೇಲ್ ಐಡಿ, ಯಾವ ರೀತಿಯ ದೂರು ಇತ್ಯಾದಿ ವಿವರಗಳನ್ನು ನಮೂದಿಸಿ ಸಬ್ಮೀಟ್ ಮಾಡಬೇಕು.

 

ದೂರು ಸಬ್ಮೀಟ್ ಆದ ನಂತರ ದೂರಿನ ಸಂಖ್ಯೆ ಹಾಗೂ ಸ್ಟೇಟಸ್ ಮಾಹಿತಿಯು ನೀವು ನೀಡಿದ ಇಮೇಲ್ ಐಡಿ ಹಾಗೂ ಮೊಬೈಲ್‍ಗೆ ಬರುತ್ತದೆ. 7 ದಿನಗಳ ಒಳಗೆ ದೂರಿನ ವಿಲೇವಾರಿ ಆಗಲಿದೆ. ಒಂದು ವೇಳೆ ದೂರು ಇತ್ಯರ್ಥವಾಗದಿದ್ದಲ್ಲಿ ಬ್ಯಾಂಕ್ ಒಂಬುಡ್ಸ್‍ಮನ್‍ಗೆ ಆನ್‍ ಲೈನ್‍ ನಲ್ಲೇ ದೂರು ಸಲ್ಲಿಸಬಹುದು.

 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 

 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಆನ್ ಲೈನ್ ಮೂಲಕ ಶಾಪಿಂಗ್ ಮಾಡುವ ಗ್ರಾಹಕರೇ ಹುಷಾರ್ !

ಬೆಂಗಳೂರು : ಶಾಪಿಂಗ್ ಆ್ಯಪ್ ಗಳ ನಕಲಿ ಆ್ಯಪ್ ಗಳನ್ನು ಬಳಸಿ ಜನರಿಗೆ ಮೋಸ ಮಾಡುತ್ತಿರುವ ಪ್ರಕರಣವೊಂದು ...

news

ತನ್ನ ನಾಲ್ಕು ಸೇವೆಗಳಲ್ಲಿ ಬದಲಾವಣೆ ಮಾಡಲಿದೆಯಂತೆ ಎಸ್.ಬಿ.ಐ

ನವದೆಹಲಿ : ಎಸ್.ಬಿ.ಐ. ತನ್ನ ಗ್ರಾಹಕರ ಹಿತದೃಷ್ಟಿಯಿಂದ ಮುಂದಿನ 60 ದಿನಗಳಲ್ಲಿ ಅದರ ನಾಲ್ಕು ಸೇವೆಗಳಲ್ಲಿ ...

news

ದಿನೇ ದಿನೇ ಇಳಿಕೆಯಾಗುತ್ತಿದೆ ಪೆಟ್ರೋಲ್-ಡೀಸೆಲ್ ಬೆಲೆ

ನವದೆಹಲಿ: ಇತ್ತೀಚೆಗೆ ಕೇಂದ್ರ ಸರ್ಕಾರ ತೈಲದ ಮೇಲಿನ ಸುಂಕ ಇಳಿಕೆ ಮಾಡಿದ ಬಳಿಕ ಪೆಟ್ರೋಲ್ ಮತ್ತು ಡೀಸೆಲ್ ...

news

ದೀಪಾವಳಿ ಹಬ್ಬದ ಪ್ರಯುಕ್ತ ಏರ್ಟೆಲ್ ಗ್ರಾಹಕರಿಗೆ ನೀಡುತ್ತಿದೆ ಬಂಪರ್ ಆಫರ್

ಬೆಂಗಳೂರು : ದೀಪಾವಳಿ ಹಬ್ಬದ ಪ್ರಯುಕ್ತ ಏರ್ಟೆಲ್ ತನ್ನ ಗ್ರಾಹಕರಿಗೆ ಬಂಪರ್ ಆಫರ್ ವೊಂದನ್ನು ...