Widgets Magazine

ಎಟಿಎಂನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ 100ರೂ ಪರಿಹಾರ ಸಿಗಲಿದೆಯಂತೆ

ನವದೆಹಲಿ| pavithra| Last Modified ಶನಿವಾರ, 28 ಸೆಪ್ಟಂಬರ್ 2019 (08:53 IST)
ನವದೆಹಲಿ : ಎಟಿಎಂನಲ್ಲಿ ಡ್ರಾ ಮಾಡಿದ ಬಂದಿಲ್ಲ ಎಂದು ಚಿಂತಿಸುವ ಗ್ರಾಹಕರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಿಹಿಸುದ್ದಿ ನೀಡಿದೆ.
ಎಟಿಎಂನಲ್ಲಿ ಡ್ರಾ ಮಾಡಿದ ಹಣ ಬರದಿದ್ದರೆ, ಗ್ರಾಹಕರಿಗೆ ದಿನಕ್ಕೆ 100 ರೂ. ಪರಿಹಾರ ನೀಡಬೇಕು. ಅಲ್ಲದೇ ಖಾತೆಯಿಂದ ಹಣ ಕಡಿತವಾಗಿದ್ದರೂ ಕೂಡ ಎಟಿಎಂನಲ್ಲಿ ಹಣ ಸಿಗದಿದ್ದರೆ ಅಂತಹ ಗ್ರಾಹಕರಿಗೆ ಪರಿಹಾರವಾಗಿ ದಿನಕ್ಕೆ 100 ರೂ. ನೀಡುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ವತಿಯಿಂದ ಬ್ಯಾಂಕುಗಳಿಗೆ ಸೂಚನೆ ನೀಡಿದೆ.


ಎಟಿಎಂಗಳಲ್ಲಿ ಹಣ ಬರದಿದ್ದರೆ ಅಥವಾ ಕಡಿಮೆ ಹಣ ಬಂದರೆ ಕೂಡಲೇ ಸಂಬಂಧಿಸಿದ ಬ್ಯಾಂಕಿಗೆ ಗ್ರಾಹಕರು ಲಿಖಿತ ರೂಪದಲ್ಲಿ ದೂರು ನೀಡಬೇಕು. ದೂರು ಸ್ವೀಕರಿಸಿದ ಬ್ಯಾಂಕ್ 6 ದಿನಗಳ ಒಳಗೆ ಗ್ರಾಹಕರ ಖಾತೆಗೆ ಹಣ ವರ್ಗಾಯಿಸಬೇಕು. ಒಂದು ವೇಳೆ ಹಣ ವರ್ಗಾವಣೆ ವಿಳಂಬವಾದಲ್ಲಿ ಪರಿಹಾರದ ಮೊತ್ತವನ್ನು ನೀಡಬೇಕು ಎಂದು ತಿಳಿಸಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :