Widgets Magazine

ಆದಾಯ ತೆರಿಗೆ ಪಾವತಿ ಮಾಡಿದರೆ ಪ್ರಧಾನಿ ಮೋದಿ ಜೊತೆಗೆ ಟೀ ಕುಡಿಯುವ ಅವಕಾಶ

ನವದೆಹಲಿ| pavithra| Last Modified ಮಂಗಳವಾರ, 4 ಜೂನ್ 2019 (07:25 IST)
ನವದೆಹಲಿ : ಆದಾಯ ತೆರಿಗೆಯನ್ನು ಸರಿಯಾದ ಸಮಯಕ್ಕೆ ಪಾವತಿ ಮಾಡುವ ತೆರಿಗೆದಾರರಿಗೆ ಹೊಸ ಆಫರ್ ವೊಂದನ್ನು ನೀಡಿದ್ದಾರೆ.ಹೌದು. ತೆರಿಗೆಯನ್ನು ಸರಿಯಾದ ಸಮಯಕ್ಕೆ ಪಾವತಿಸುವ ತೆರಿಗೆದಾರರಿಗೆ ಹಣಕಾಸು ಸಚಿವರು ಹಾಗೂ ಪ್ರಧಾನಿ ಮೋದಿ ಅವರ ಜೊತೆ ಟೀ ಕುಡಿಯುವ ಅವಕಾಶವನ್ನು ನೀಡುವುದಾಗಿ ಕೇಂದ್ರ ಸರ್ಕಾರ ತಿಳಿಸಿದೆ. ಜನರು ತೆರಿಗೆಯನ್ನು ಸರಿಯಾದ ಸಮಯಕ್ಕೆ ಪಾವತಿಸದೇ ಇರುವ  ಹಿನ್ನಲೆಯಲ್ಲಿ ತೆರಿಗೆ ಪಾವತಿಸುವಂತೆ ಜನರಿಗೆ ಪ್ರೋತ್ಸಾಹ ನೀಡಲು ಈ ಯೋಜನೆಯನ್ನು ರೂಪಿಸಲಾಗಿದೆ.

 

ಈ ಮೂಲಕ ತೆರಿಗೆದಾರರ ಮೇಲೆ ಯಾವುದೇ ರೀತಿಯ ಕ್ರಮ ಕೈಗೊಳ್ಳದಂತೆ ಅವರಿಂದ ತೆರಿಗೆ ಸಂಗ್ರಹ ಮಾಡಲು ಸರ್ಕಾರ ನಿರ್ಧಾರ ಮಾಡಿದೆ. ಎರಡನೇ ಬಾರಿ ಅಧಿಕಾರ ಸ್ವೀಕರಿಸಿದ ಪ್ರಧಾನಿ ಮೋದಿಯವರು  ತೆರಿಗೆ ವ್ಯವಸ್ಥೆಯಲ್ಲಿ ಕೆಲವೊಂದು ಬದಲಾವಣೆ ಮಾಡುವ ಉದ್ದೇಶವನ್ನು ಹೊಂದಿದ್ದು, ಈ ಬಗ್ಗೆ ಮೊದಲ ಬಜೆಟ್ ನಲ್ಲಿ ಘೋಷಣೆ ಮಾಡಲಿದ್ದಾರೆ ಎನ್ನಲಾಗಿದೆ.

 

 
ಇದರಲ್ಲಿ ಇನ್ನಷ್ಟು ಓದಿ :