ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆ

ನವದೆಹಲಿ| pavithra| Last Modified ಶನಿವಾರ, 27 ಜೂನ್ 2020 (10:43 IST)
ನವದೆಹಲಿ : ಸತತವಾಗಿ 21ನೇ ದಿನವೂ  ಕೂಡ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಏರಿಕೆಯಾಗಿದ್ದು, ಇಂದು ಪೆಟ್ರೋಲ್ ಬೆಲೆ ಲೀಟರ್ ಗೆ 25ಪೈಸೆ ಹಾಗೂ ಡೀಸೆಲ್ ಬೆಲೆ ಲೀಟರ್ ಗೆ 21ಪೈಸೆ ಹೆಚ್ಚಳವಾಗಿದೆ.

ಅದರಂತೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 80.38ರೂ. ಮತ್ತು ಡೀಸೆಲ್ ಬೆಲೆ 80.40ರೂ ಆಗಿದ್ದು, ಮುಂಬೈನಲ್ಲಿ  ಪೆಟ್ರೋಲ್ ಬೆಲೆ 87ರೂ. ಮತ್ತು ಡೀಸೆಲ್ ಬೆಲೆ 87.14ರೂ ಆಗಿದ್ದು, ಬೆಂಗಳೂರಿನಲ್ಲಿ  ಪೆಟ್ರೋಲ್ ಬೆಲೆ 82.99ರೂ. ಮತ್ತು ಡೀಸೆಲ್ ಬೆಲೆ 76.45ರೂ ತಲುಪಿದೆ.



ಇದರಲ್ಲಿ ಇನ್ನಷ್ಟು ಓದಿ :