Widgets Magazine

ಭಾರತ-ಪಾಕಿಸ್ತಾನ ಪಂದ್ಯದ ಇಫೆಕ್ಟ್: ನಾಳೆ ಜಾಹೀರಾತು ದರ ಕೇಳಿದರೂ ಬೆಚ್ಚಿಬೀಳುತ್ತೀರಿ!

Mumbai| Krishnaveni K| Last Modified ಶನಿವಾರ, 17 ಜೂನ್ 2017 (13:08 IST)
ಮುಂಬೈ: ಭಾರತ-ಪಾಕಿಸ್ತಾನ ಪಂದ್ಯವೆಂದರೆ ಅದೆಷ್ಟು ಮಂದಿ ಜೇಬು ತುಂಬಿಸಿಕೊಳ್ಳುತ್ತಾರೋ. ಅದೂ ಫೈನಲ್ ಪಂದ್ಯ ಬೇರೆ. ಹೀಗಿರುವಾಗ ಜಾಹೀರಾತು ದರ ಕೇಳುವಂತೆಯೇ ಇಲ್ಲ.

 
ಪ್ರಮುಖ ಪ್ರಸಾರ ವಾಹಿನಿ ಸ್ಟಾರ್ ಸ್ಪೋರ್ಟ್ಸ್ ನಲ್ಲಿ ಜಾಹೀರಾತು ದರ ನಾಳೆಯ ಮಟ್ಟಿಗೆ ಗಗನಕ್ಕೇರಲಿದೆ. ನಾಳೆ ಇಡೀ ವಿಶ್ವವೇ ಸ್ಟಾರ್ ಸ್ಪೋರ್ಟ್ಸ್ ಆನ್ ಮಾಡಿ ಕೂರುವುದು ಗ್ಯಾರಂಟಿ. ಹೀಗಾಗಿ ಸಂಸ್ಥೆ ತನ್ನ ಜಾಹೀರಾತು ಮೌಲ್ಯವನ್ನೂ 10 ಪಟ್ಟು ಹೆಚ್ಚಿಸಿದೆ.
 
ನಾಳೆ 30 ಸೆಕೆಂಡುಗಳ ಜಾಹೀರಾತಿಗೆ ಜಾಹೀರಾತುದಾರರು ಕನಿಷ್ಠ 10 ಮಿಲಿಯನ್ ರೂ. ನೀಡಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಸಾಮಾನ್ಯ ದಿನಗಳಲ್ಲಿ ಇದು 1 ಮಿಲಿಯನ್ ರೂ.ಗಳಷ್ಟಿರುತ್ತದೆ.
 
ಈಗಾಗಲೇ ಭಾರತ ಕ್ರಿಕೆಟ್ ತಂಡ ಅಧಿಕೃತ ಸ್ಪಾನ್ಸರ್ ಸಂಸ್ಥೆ ಒಪ್ಪೊ, ಇಂಟೆಲ್, ನಿಸಾನ್ ಮೋಟಾರ್ಸ್ ಸೇರಿದಂತೆ ಹಲವು ಸಂಸ್ಥೆಗಳು ಜಾಹೀರಾತಿಗಾಗಿ ಒಪ್ಪಂದ ಸ್ಟಾರ್ ಸಂಸ್ಥೆ ಜತೆ ಬುಕಿಂಗ್ ಮಾಡಿಕೊಂಡಿದೆ.
 
ಉಳಿದಂತೆ ಕೇವಲ 10 ಶೇಕಡಾ ಸ್ಥಳವಾಕಾಶ ಖಾಲಿಯಿದೆ. ಹೀಗಾಗಿ ವಾಣಿಜ್ಯ ದೃಷ್ಟಿಯಿಂದಲೂ ಈ ಪಂದ್ಯ ಭಾರೀ ಲಾಭಕರ ಮತ್ತು ದುಬಾರಿ ಎಂದು ಮಾರುಕಟ್ಟೆ ತಜ್ಞರು ಲೆಕ್ಕ ಹಾಕಿದ್ದಾರೆ.
 
//kannada.fantasycricket.webdunia.com
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :