Widgets Magazine

ಸಂತಷದ ಸುದ್ದಿ: ಮರಳಿ ಬರುತ್ತಿದೆ ನೋಕಿಯಾ 3310

ನವದೆಹಲಿ| Jaya| Last Updated: ಬುಧವಾರ, 15 ಫೆಬ್ರವರಿ 2017 (13:17 IST)
ನೋಕಿಯಾ ಕಂಪನಿಯ ಜನಪ್ರಿಯ ಬೆಸಿಕ್ ಸೆಟ್ 3310 ಮತ್ತೆ ಬಿಡುಗಡೆಯಾಗುತ್ತಿದೆ ಎಂಬ ಸುದ್ದಿ ಹರಿದಾಡುತ್ತಿದೆ. ಆಂಡ್ರಾಯ್ಡ್ ಯುಗದಲ್ಲಿ ಭಿನ್ನ ವಿಭಿನ್ನ, ಅತ್ಯಾಧುನಿಕ ಸ್ಮಾರ್ಟ್ ಫೋನ್‌ಗಳು ಬಂದರೂ ತನ್ನ ಛಾಪನ್ನು ಹಾಗೆಯೇ ಉಳಿಸಿಕೊಂಡಿದೆ. ಹೆಚ್ಚಿನವರ ಮೊದಲ ಮೊಬೈಲ್  ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿರುವ 3310 ಇಂದಿಗೂ ತನ್ನ ಬೇಡಿಕೆಯನ್ನು ತಗ್ಗಿಸಿಕೊಂಡಿಲ್ಲ.
ಈ ಹಿನ್ನೆಲೆಯಲ್ಲಿ ನೋಕಿಯಾ ಇದೇ ತಿಂಗಳು ಮಾರುಕಟ್ಟೆಗೆ 3310 ಮೊಬೈಲ್‌ನ್ನು ಮತ್ತೆ ಬಿಡುಗಡೆ ಮಾಡಲಿದೆ ಎನ್ನಲಾಗುತ್ತಿದ್ದು, ಭಾರಿ ಬೇಡಿಕೆ ಸೃಷ್ಟಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ.
 
ಒಂದು ಬಾರಿ ಚಾರ್ಜ್ ಮಾಡಿದರೆ 10 ದಿನಕ್ಕಿಂತ ಹೆಚ್ಚು ದಿನ ಕಾರ್ಯ ನಿರ್ವಹಿಸುವ ಕ್ಷಮತೆ ಹೊಂದಿದ್ದ ನೋಕಿಯಾ 3310 ಮತ್ತೆ ಬಿಡುಗಡೆಯಾಗುತ್ತಿರುವುದು ಹಲವರಿಗೆ ಸಂತಷ ತಂದಿದೆ.
 
 



ಇದರಲ್ಲಿ ಇನ್ನಷ್ಟು ಓದಿ :