ಅದಾನಿ ಹಲವು ತಿಂಗಳ ಹಿಂದೆ ವಿಶ್ವದ ನಂ೨ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನವನ್ನು ಪಡೆದು, ಭಾರತದ ಹಿರಿಮೆ-ಗರಿಮೆಯನ್ನು ಜಾಗತಿಕವಾಗಿ ಹೆಚ್ಚಿಸಿ ಬಿಟ್ಟಿದ್ದರು. ಆದ್ರೆ ಅದ್ಯಾಕೋ, ಏನೋ ಕಾಲ ಎಲ್ಲರ ಕಾಲು ಎಳೆಯುತ್ತೆ ಅನ್ನುವಾಗೆ, ಏಕಾಏಕಿಯಾಗಿ ಅದಾನಿ ಗ್ರೂಪ್ ಕಂಪನಿಗಳ ಷೇರುಗಳು ಕುಸಿದು, ಎರಡನೇ ಶ್ರೀಮಂತರ ಪಟ್ಟಿಯಲ್ಲಿದ್ದ, ಅದಾನಿ ಹೋಗಿ ತಲುಪಿದ್ದು ಅದೆಲ್ಲಿಗೆ ಎಂಬುದು ನಿಮಗೆ ಗೊತ್ತೆ ಇದೆ. ಅದಾನಿಯ ನಸೀಬು ಕೆಟ್ಟಿದ್ದು, ಈ ಹಿಂದೆ ಹಿಂಡನ್ಬರ್ಗ್ ಕೊಟ್ಟ ಆ ವರದಿಯಿಂದ.