ಇನ್ನು ಮುಂದೆ ಇನ್ ಕಮಿಂಗ್ ಕಾಲ್ ಸ್ವೀಕರಿಸಲು ರಿಚಾರ್ಜ್ ಮಾಡಲೇಬೇಕಂತೆ

ನವದೆಹಲಿ, ಗುರುವಾರ, 22 ನವೆಂಬರ್ 2018 (12:54 IST)

ನವದೆಹಲಿ : ಇಷ್ಟು ದಿನ ಮೊಬೈಲ್ ಬಳಕೆದಾರರು ರಿಚಾರ್ಚ್ ಮಾಡಲಿ, ಮಾಡದೇ ಇರಲಿ ನ್ ಕಮಿಂಗ್ ಕಾಲ್ ಮಾತ್ರ ಉಚಿತವಾಗಿ ಸಿಗುತ್ತಿತ್ತು. ಆದರೆ ಇನ್ನುಮುಂದೆ ಇನ್ ಕಮಿಂಗ್ ಕಾಲ್ ಗೂ  ರಿಚಾರ್ಚ್ ಮಾಡಬೇಕಾಗುತ್ತದೆ.


ಹೌದು. ಕೆಲವು ಟೆಲಿಕಾಮ್ ಸಂಸ್ಥೆಗಳು ಜಿಯೋಗೆ ಪೈಪೋಟಿ ನೀಡಲು ಹೋಗಿ ವಿವಿಧ ಆಫರ್ ಗಳನ್ನು ಘೋಷಣೆ ಮಾಡಿ ಇದೀಗ ಬಾರೀ ನಷ್ಟದಲ್ಲಿ ಸಿಲುಕಿವೆ. ಅಲ್ಲದೇ ಕೇವಲ 10 ರೂಗಳಿಗೆ ಜಿಯೋ ಸಿಮ್ ದೊರೆಯುತ್ತಿದ್ದು, ಇದರಲ್ಲಿ ಇನ್ ಕಮಿಂಗ್ ಕರೆಗಳೂ ಮತ್ತು ಮೂರು ತಿಂಗಳ ಹೊರ ಹೋಗುವ ಕರೆಗಳೂ ಉಚಿತವಾಗಿ ದೊರೆಯುತ್ತಿವೆ. ಇದೇ ಕಾರಣಕ್ಕೆ ಗ್ರಾಹಕರು ರಿಚಾರ್ಜ್ ಗಿಂತ ಹೊಸ ಸಿಮ್ ಕಾರ್ಡ್ ಖರೀದಿ ಮಾಡಲು ಮುಂದಾಗುತ್ತಿದ್ದಾರೆ ಎನ್ನಲಾಗಿದೆ.


 
ಆದಕಾರಣ ಉಚಿತ ಇನ್ ಕಮಿಂಗ್ ಕಾಲ್ ಸೇವೆ ಸ್ಥಗಿತಗೊಳಿಸಿ ಅದಕ್ಕೂ ನಿಗದಿತ ದರ ವಿಧಿಸಲು ಟೆಲಿಕಾಮ್ ಸಂಸ್ಥೆಗಳು ಮುಂದಾಗಿವೆ. ಇನ್ನು ಮುಂದೆ ರಿಚಾರ್ಜ್ ಮಾಡಿ ಅದು ಮುಕ್ತಾಯದ ಬಳಿಕ ಗ್ರಾಹಕನು ರಿಚಾರ್ಜ್ ಮಾಡಿಸಿದರೆ ಮಾತ್ರ ಮೊಬೈಲ್ ಸಂಖ್ಯೆ ಚಾಲನೆಯಲ್ಲಿರುತ್ತದೆ. ಇಲ್ಲವಾದರೆ ಯಾವುದೇ ಕರೆ ಸ್ವೀಕರಿಸಲು ಸಾಧ್ಯವಾಗುವುದಿಲ್ಲ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಭೀಮ್ ಎಸ್.ಬಿ.ಐ. ಪೇ ಆಪ್ ಮೂಲಕ ಪೆಟ್ರೋಲ್ ಗೆ ಹಣ ಪಾವತಿ ಮಾಡುವ ವಾಹನ ಸವಾರರಿಗೆ ಬಂಫರ್ ಆಫರ್

ಬೆಂಗಳೂರು : ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪೆಟ್ರೋಲ್ ಬಂಕ್ ನಲ್ಲಿ ಪೆಟ್ರೋಲ್ ತುಂಬಿಸಿದ ವಾಹನ ಸವಾರರಿಗೆ ...

news

ಇಂದು ಕೂಡ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಇಳಿಕೆ

ನವದೆಹಲಿ : ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಸತತವಾಗಿ ಕುಸಿಯುತ್ತಿರುವ ಹಿನ್ನಲೆಯಲ್ಲಿ ...

news

ಜಿಯೋದಿಂದ ಗ್ರಾಹಕರಿಗೆ ಸಿಗಲಿದೆ 300 ರೂಪಾಯಿಗಿಂತ ಕಡಿಮೆ ಬೆಲೆಯ ಈ ಮೂರು ಆಫರ್ ಗಳು

ನವದೆಹಲಿ : ರಿಲಾಯನ್ಸ್ ಜಿಯೋ ಕಂಪೆನಿ ತನ್ನ ಗ್ರಾಹಕರಿಗೆ 300 ರೂಪಾಯಿಗಿಂತ ಕಡಿಮೆ ಬೆಲೆಯ ಮೂರು ಆಫರ್ ...

news

ಬಳಕೆದಾರರಿಗೆ ಈ ಕುರಿತು ಎಚ್ಚರಿಕೆ ನೀಡಿದ ವಾಟ್ಸಾಪ್

ಬೆಂಗಳೂರು : ಇತ್ತೀಚೆಗೆ ವಾಟ್ಸಾಪ್ ನಲ್ಲಿ ಫೇಕ್ ಮೆಸೇಜ್‍ ಗಳ ಹರಿದಾಟ ಹೆಚ್ಚಾಗಿರುವ ಹಿನ್ನಲೆಯಲ್ಲಿ ಇದೀಗ ...