Widgets Magazine

ಜೆಟ್ ಏರ್‌ವೇಸ್ ರಿಪಬ್ಲಿಕ್ ಡೇ ಉಡುಗೊರೆ

New Delhi| Rajendra| Last Modified ಶುಕ್ರವಾರ, 27 ಜನವರಿ 2017 (09:50 IST)
ಪ್ರಮುಖ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇರ್ ರಿಪಬ್ಲಿಕ್ ಸೇಲ್ ಆಫರನ್ನು ಪ್ರಕಟಿಸಿದೆ. ಇದರ ಭಾಗವಾಗಿ ರೂ.999ಕ್ಕೆ ದೇಶೀಯ ಪ್ರಯಾಣವನ್ನು ಒದಗಿಸುವುದಾಗಿ ಘೋಷಿಸಿದೆ. ಇದನ್ನು ಬುಕ್ ಮಾಡಿಕೊಂಡವರ ಪ್ರಯಾಣ ಫೆಬ್ರವರಿ 9, 2017ರಿಂದ ಇರಬೇಕೆಂದು ಷರತ್ತು ವಿಧಿಸಿದೆ.

ಈ ಆಫರ್ ಬುಕಿಂಗ್ ಜನವರಿ 25ರಿಂದ ಜನವರಿ 29ರ ನಡುವೆ ಮಾಡಿಕೊಂಡಿರಬೇಕು. ಪ್ರಯಾಣಕ್ಕೂ 15 ದಿನಗಳ ಮುಂಚೆ ಟೆಕೆಟ್‌ಗಳನ್ನು ತೆಗೆದುಕೊಳ್ಳಬೇಕೆಂದು ತಿಳಿಸಿದೆ. ಈ ಆಫರ್ ಅಡಿಯಲ್ಲಿ ಎಷ್ಟು ಟಿಕೆಟ್‌ಗಳನ್ನು ಕೊಡುತ್ತಿದ್ದೇವೆ ಎಂಬುದನ್ನು ಜೆಟ್ ಏರ್‌ವೇಸ್ ಪ್ರಕಟಿಸಿಲ್ಲ.

ರಿಪಬ್ಲಿಕ್ ಡೇ ಸೇಲ್ ಆಫರ್ ಅಡಿಯಲ್ಲಿ ಅಂತಾರಾಷ್ಟ್ರೀಯ ಪ್ರಯಾಣಗಳ ಪ್ರೀಮಿಯರ್, ಎಕಾನಮಿ ಕ್ಲಾಸ್ ರಿಟರ್ನ್ ಟಿಕೆಟ್‌ನಲ್ಲಿ ಜೆಟ್ ಏರ್‌ವೇಸ್ ಶೇ.30ರಷ್ಟು ರಿಯಾಯಿತಿ ಪ್ರಕಟಿಸಿದೆ. ಈ ಟಿಕೆಟ್‌ಗಳನ್ನು ಜನವರಿ 25ರಿಂದ ಜನವರಿ 27ರ ಒಳಗೆ ಬುಕ್ ಮಾಡಿಕೊಳ್ಳಬೇಕು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :