ನವದೆಹಲಿ : ಏರ್ಟೆಲ್ ಹಾಗೂ ವೊಡಾಫೋನ್ ಗಳಿಗೆ ಟಕ್ಕರ್ ನೀಡಲು ಜಿಯೋ 222 ರೂ. ಗಳ ಹೊಸ ಯೋಜನೆಯನ್ನು ಬಿಡುಗಡೆ ಮಾಡಿದೆ. ಜಿಯೋ 222 ರೂ. ಗಳ ಈ ಹೊಸ ಯೋಜನೆಯಲ್ಲಿ ಗ್ರಾಹಕರಿಗೆ ಅನಿಯಮಿತ ಜಿಯೋ-ಟು-ಜಿಯೋ ಕರೆಗಳು ಹಾಗೂ ಇತರ ನೆಟ್ ವರ್ಕ್ ಗಳಿಗೆ 1000ನಿಮಿಷ ಉಚಿತ ಕರೆ ಸೌಲಭ್ಯ ನೀಡುತ್ತಿದೆ. ಹಾಗೇ ಪ್ರತಿದಿನ 2 ಜಿಬಿ 4ಜಿ ಡೇಟಾ ಸಿಗಲಿದೆ. ಅಲ್ಲದೇ ಅನಿಯಮಿತ ಎಸ್ ಎಂಎಸ್ ಗಳನ್ನು ನೀಡಲಾಗುತ್ತಿದೆ.