ಆಂಡ್ರಾಯ್ಡ್ ಬಳಕೆದಾರರಿಗಾಗಿ ಜಿಯೋ ಬಿಡುಗಡೆ ಮಾಡಿದೆ ಈ ಹೊಸ ಆಪ್

ನವದೆಹಲಿ, ಭಾನುವಾರ, 20 ಜನವರಿ 2019 (06:56 IST)

ನವದೆಹಲಿ : ರಿಲಾಯನ್ಸ್ ಜಿಯೋ ಆಂಡ್ರಾಯ್ಡ್ ಬಳಕೆದಾರರಿಗಾಗಿ ಜಿಯೋ ಬ್ರೌಸರ್ ಆಪ್ ಎಂಬ ಹೊಸ ಆಪ್ ವೊಂದನ್ನು ಬಿಡುಗಡೆ ಮಾಡಿದೆ.


ಆಂಡ್ರಾಯ್ಡ್ ಗ್ರಾಹಕರಿಗೆ ಮಾತ್ರ ಲಭ್ಯವಿರುವ ಈ ಆಪ್ ನ್ನು ಬಳಕೆ ಮಾಡಲು ಗ್ರಾಹಕರ ಬಳಿ ಜಿಯೋ ಸಿಮ್ ಇರಬೇಕೆಂದಿಲ್ಲ. ಭಾರತೀಯ ಬಳಕೆದಾರರಿಗೆ ಅನುಕೂಲವಾಗಲೆಂದು ಜಿಯೋ ಈ ಆಪ್ ನ್ನು ಶುರು ಮಾಡಿರುವುದಾಗಿ ಕಂಪನಿ ತಿಳಿಸಿದೆ. ಇದು ಹಿಂದಿ, ಕನ್ನಡ, ತೆಲುಗು, ತಮಿಳು, ಬಂಗಾಳಿ ಭಾಷೆಯಲ್ಲಿ ಲಭ್ಯವಿದೆ.


ಕೇವಲ 4.8 ಎಂಬಿ ಗಾತ್ರದ ಈ ಜಿಯೋ ಬ್ರೌಸರ್ ಆಪ್ ಆನ್ ಮಾಡಿದರೆ ರಾಜಕೀಯ, ಮನರಂಜನೆ, ಕ್ರೀಡೆ ಸೇರಿದಂತೆ ಎಲ್ಲ ಮಾಹಿತಿ ಸಿಗಲಿದೆ. ಖಾಸಗಿ ಬ್ರೌಸಿಂಗ್ ವ್ಯವಸ್ಥೆಯನ್ನೂ ನೀಡಲಾಗಿದೆ. ಬಳಕೆದಾರರು, ಬ್ರೌಸರ್ ಲಿಂಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳುವ ವ್ಯವಸ್ಥೆಯನ್ನೂ ಇದರಲ್ಲಿದೆ. ವಾಯ್ಸ್ ಇನ್ಪುಟ್ ಸೌಲಭ್ಯ ಕೂಡ ನೀಡಲಾಗಿದ್ದು,  ಧ್ವನಿ ಮೂಲಕ ಕಮಾಂಡ್ ನೀಡಿ ನೀವು ನಿಮಗೆ ಬೇಕಾದ ವಿಷಯವನ್ನು ಹುಡುಕಬಹುದಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.
 
 ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ನಾಣ್ಯಗಳ ಪುನರ್ ವಿನ್ಯಾಸಕ್ಕೆ ಸರ್ಕಾರ ಚಿಂತನೆ: ಶೀಘ್ರದಲ್ಲಿ 20 ರೂ.ನಾಣ್ಯ ಬಿಡುಗಡೆ

ಇಪ್ಪತ್ತು ರೂಪಾಯಿ ನಾಣ್ಯ ತರಬೇಕೆ ಅಥವಾ ನೋಟು ತರಬೇಕೆ ? ಏನು ಬಿಡುಗಡೆಗೊಳಿಸಬೇಕು? ದೀರ್ಘವಾದ ಚರ್ಚೆಯ ...

news

399 ರೂಪಾಯಿ ಪ್ಲಾನ್ ನಲ್ಲಿ ಬದಲಾವಣೆ ಮಾಡಿದ ಬಿ.ಎಸ್‌.ಎನ್‌.ಎಲ್

ನವದೆಹಲಿ : ಜಿಯೋದ 399 ಪ್ಲಾನ್ ಗೆ ಟಕ್ಕರ್ ನೀಡಲು ಬಿ.ಎಸ್‌.ಎನ್‌.ಎಲ್. ತನ್ನ 399 ರೂಪಾಯಿ ಪ್ಲಾನ್ ನಲ್ಲಿ ...

news

ಅಟಲ್ ಪೆನ್ಷನ್ ಯೋಜನೆ (ಎಪಿಐ): ಕೇವಲ 210 ರೂ ತಿಂಗಳ ಹೂಡಿಕೆಯೊಂದಿಗೆ 60 ಸಾವಿರ ಪಿಂಚಣಿ

ಕಳೆದ 2015 ರಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ಅಟಲ್ ಪಿಂಚಣಿ ಯೋಜನೆ (ಎಪಿವೈ)ಯನ್ನು ...

news

ಬಡವರಿಗಾಗಿ ಎಸ್.ಬಿ.ಐ. ಜಾರಿಗೆ ತಂದಿದೆ ಈ ಹೊಸ ಯೋಜನೆ

ನವದೆಹಲಿ : ಬಡವರು ಉಳಿತಾಯ ಖಾತೆ ಹೊಂದಿರಬೇಕು ಎಂಬ ಉದ್ದೇಶದಿಂದ ಭಾರತೀಯ ಸ್ಟೇಟ್ ಬ್ಯಾಂಕ್ ಹೊಸ ...