Widgets Magazine

ಅಮರನಾಥ ಯಾತ್ರಾದಿಗಳಿಗಾಗಿ ಜಿಯೋ ಬಿಡುಗಡೆ ಮಾಡಿದೆ ಈ ಹೊಸ ಪ್ಲ್ಯಾನ್

ನವದೆಹಲಿ| pavithra| Last Modified ಸೋಮವಾರ, 8 ಜುಲೈ 2019 (09:17 IST)
ನವದೆಹಲಿ : ಅಮರನಾಥ ಯಾತ್ರಾದಿಗಳಿಗೆ ಅನುಕೂಲವಾಗುವಂತೆ ರಿಲಾಯನ್ಸ್ ಜಿಯೋ  ಪ್ರೀಪೇಯ್ಡ್ ಪ್ಲಾನ್ ವೊಂದನ್ನು ಪರಿಚಯಿಸಿದೆ.ರಿಲಾಯನ್ಸ್ ಜಿಯೋ 102 ರೂ. ಮುಖಬೆಲೆಯ ಪ್ರೀಪೇಯ್ಡ್ ಪ್ಲಾನ್ ನ್ನು ಬಿಡುಗಡೆ ಮಾಡಿದ್ದು, ಹೊರರಾಜ್ಯಗಳ ಚಂದಾದಾರರು ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರೀಪೇಯ್ಡ್ ರೋಮಿಂಗ್ ಸೌಲಭ್ಯ ಬಳಸಲು ನಿರ್ಬಂಧವಿರುವುದರಿಂದ ಯಾತ್ರಾರ್ಥಿಗಳು ಸಂಪರ್ಕದಲ್ಲಿ ಅಡಚಣೆ  ಉಂಟಾಗುತ್ತದೆ. ಆದಕಾರಣ ದೇಶದ ವಿವಿಧ ಭಾಗಗಳಿಂದ ಅಮರನಾಥ ಯಾತ್ರೆಗೆಂದು ಬರುವ, ಪ್ರೀಪೇಯ್ಡ್ ಮೊಬೈಲ್ ಸಂಪರ್ಕ ಬಳಸುವ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಈ ಹೊಸ ಪ್ಲಾನ್ ಅನ್ನು ವಿನ್ಯಾಸಗೊಳಿಸಲಾಗಿದೆ.


ಈ ಪ್ಲ್ಯಾನ್ ನಲ್ಲಿ ಅನಿಯಮಿತ ವಾಯ್ಸ್ ಕರೆಗಳು (ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ), ಅನ್ ಲಿಮಿಟೆಡ್ ಎಸ್ ಎಂ ಎಸ್, ಅನ್ ಲಿಮಿಟೆಡ್ ಡೇಟಾ (ದಿನಕ್ಕೆ 0.5 ಜಿಬಿ ಅತಿವೇಗದ ಡೇಟಾ ಮತ್ತು ಆನಂತರ 64 ಕೆಬಿಪಿಎಸ್‌ನಲ್ಲಿ ಅಪರಿಮಿತ ಡೇಟಾ) ಸಿಗಲಿದೆ. ಈ ಪ್ಲ್ಯಾನ್ 7 ದಿನಗಳ ವ್ಯಾಲಿಡಿಟಿಯನ್ನು ಹೊಂದಿದೆ.
ಇದರಲ್ಲಿ ಇನ್ನಷ್ಟು ಓದಿ :