ಹೊರಹೋಗುವ ವಾಯ್ಸ್ ಕಾಲ್ ಗಳಿಗೆ ದರ ನಿಗದಿ ಮಾಡಿದ ಜಿಯೋ

ನವದೆಹಲಿ, ಗುರುವಾರ, 10 ಅಕ್ಟೋಬರ್ 2019 (08:49 IST)

ನವದೆಹಲಿ : ಗ್ರಾಹಕರನ್ನು ಸೆಳೆಯಲು ಹಲವು ಬಗೆಯ ಆಫರ್ ಗಳನ್ನು ನೀಡುತ್ತಿದ್ದ ಜಿಯೋ ಇದೀಗ ಹೊರಹೋಗುವ ವಾಯ್ಸ್ ಕಾಲ್ ಗಳಿಗೆ ದರ ನಿಗದಿ ಮಾಡಲು ಮುಂದಾಗಿರುವ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.
ಹೌದು. ರಿಲಯನ್ಸ್ ಜಿಯೋ ದಲ್ಲಿ ತನಕ ನಿಗದಿತ ಮೊತ್ತ ಪಾವತಿಸಿದರೆ ಒಳಬರುವ ಹಾಗೂ ಹೊರಹೋಗುವ ಕರೆಗಳು ಸಂಪೂರ್ಣ ಉಚಿತವಾಗಿದ್ದರ ಜೊತೆಗೆ ರಿಚಾರ್ಜ್ ಗೆ ಅನುಗುಣವಾಗಿ ಡೇಟಾ ಸಹ ಲಭ್ಯವಾಗುತ್ತಿತ್ತು. ಆದರೆ ಈಗ ಜಿಯೋ ಹೊರತುಪಡಿಸಿ ಇತರೆ ನೆಟ್ವರ್ಕ್ ಗಳಿಗೆ ಇನ್ನು ಮುಂದೆ ಕರೆ ಮಾಡಿದರೆ ಪ್ರತಿ ನಿಮಿಷಕ್ಕೆ 6 ಪೈಸೆ ಚಾರ್ಜ್ ಆಗಲಿದೆ, ಇದು ನಿನ್ನೆಯಿಂದಲೇ ಜಾರಿಗೆ ಬಂದಿದೆ.


ಪ್ರಾರಂಭದಲ್ಲಿ ಜಿಯೋ ವಾಯ್ಸ್‌ ಕಾಲ್‌ ಉಚಿತವಾಗಿದ್ದರಿಂದ ನಷ್ಟಕ್ಕೊಳಗಾದ ಇತರ ಟೆಲಿಕಾಂ ಕಂಪೆನಿಗಳಿಗೆ ಶುಲ್ಕ ರೂಪದಲ್ಲಿ ರೂ. 13,500 ಕೋಟಿ ಪಾವತಿಸಬೇಕಾಗಿದೆ. ಇದನ್ನು ತುಂಬಿಕೊಳ್ಳಲು ತನ್ನ ಪ್ರತಿಸ್ಪರ್ಧಿ ಕಂಪನಿಗಳ ನೆಟ್‌ ವರ್ಕ್‌ ಗೆ ಕರೆ ಮಾಡುವುದಕ್ಕೆ ಶುಲ್ಕ ವಿಧಿಸಲು ಆರಂಭಿಸಿದೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ವ್ಯವಹಾರ

news

ಹಬ್ಬದ ಈ ವೇಳೆ ಎಸ್.ಬಿ.ಐ. ತನ್ನ ಡೆಬಿಟ್ ಕಾರ್ಡ್ ಗ್ರಾಹಕರಿಗೆ ನೀಡಿದೆ ಈ ವಿಶೇಷವಾದ ಸೌಲಭ್ಯ

ನವದೆಹಲಿ : ಹಬ್ಬದ ಈ ಸಮಯದಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ತನ್ನ ಡೆಬಿಟ್ ಕಾರ್ಡ್ ಗ್ರಾಹಕರಿಗೆ ...

news

ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ ನ ಮತ್ತೆ ಪ್ರಾರಂಭಿಸಿದ ಅಮೆಜಾನ್

ನವದೆಹಲಿ : ದಸರಾ, ದೀಪಾವಳಿ ಹಬ್ಬದ ಪ್ರಯುಕ್ತ ಅಮೆಜಾನ್​ ಗ್ರೇಟ್​ ಇಂಡಿಯನ್​ ಫೆಸ್ಟಿವಲ್​ ಸೇಲ್​ ನ್ನು ...

news

ಆ್ಯಪಲ್​ ಸಂಸ್ಥೆಯ ಈ ಫೋನ್ ಗಳಲ್ಲಿ ಸಮಸ್ಯೆ ಕಂಡುಬಂದರೆ ಉಚಿತ ಸರ್ವೀಸ್​ ಮಾಡಿಕೊಡಲಾಗುವುದು

ನವದೆಹಲಿ : ಪ್ರತಿಷ್ಠಿತ ಆ್ಯಪಲ್​ ​ ಸಂಸ್ಥೆಯ ಕೆಲವು ಫೋನ್‌ಗಳು ಸರಿಯಾಗಿ ಕೆಲಸ ಮಾಡದೇ ಇರುವ ಕಾರಣ ಉಚಿತ ...

news

ದಸರಾ, ದೀಪಾವಳಿಗೆ ಜಿಯೋ ಕಡೆಯಿಂದ ಬಂಪರ್ ಆಫರ್

ನವದೆಹಲಿ : ದಸರಾ, ದೀಪಾವಳಿ ಹಬ್ಬಕ್ಕೆ ಗ್ರಾಹಕರಿಗೆ ಜಿಯೋ ಬಂಪರ್ ಆಫರವೊಂದನ್ನು ಘೋಷಿಸಿದ್ದು, ತನ್ನ 4ಜಿ ...