ನವದೆಹಲಿ : ಗ್ರಾಹಕರಿಗೆ ಡಿಜಿಟಲ್ ರಿಚಾರ್ಜ್ ಸುಲಭಗೊಳಿಸಲು ರಿಲಾಯನ್ಸ್ ಜಿಯೋ ಹೊಸ ಧ್ವನಿ ಆಧಾರಿತ ಸಹಾಯಕ ಸಾರತಿ ಯೋಜನೆಯನ್ನು ಮೈ ಜಿಯೋ ಅಪ್ಲಿಕೇಷನ್ ನಲ್ಲಿ ಬಿಡುಗಡೆ ಮಾಡಿದೆ.ಜಿಯೋ ಚಂದಾದಾರರಿಗೆ ಡಿಜಿಟಲ್ ರೀಚಾರ್ಜ್ ಮಾಡಲು ಇದರಿಂದ ಅನುಕೂಲವಾಗಲಿದ್ದು, ಆಂಡ್ರಾಯ್ಡ್ ಮತ್ತು ಐಒಎಸ್ ಬಳಕೆದಾರರು ಇದರ ಮೂಲಕ ಸುಲಭವಾಗಿ ರಿಚಾರ್ಜ್ ಮಾಡಬಹುದಾಗಿದೆ. ಸ್ಮಾರ್ಟ್ಫೋನ್ಗಳಲ್ಲಿ ಇತ್ತೀಚಿನ ಮೈಜಿಯೊ ಅಪ್ಲಿಕೇಶನ್ ಹೊಂದಿರಬೇಕು. ಬಳಕೆದಾರರು ರೀಚಾರ್ಜ್ ಬಟನ್ ಒತ್ತಿದ ನಂತರ ಅಪ್ಲಿಕೇಶನ್ ಫ್ಲೋಟಿಂಗ್ ಐಕಾನ್ ರೂಪದಲ್ಲಿ ಕಾಣುತ್ತದೆ.