Widgets Magazine

ಸದ್ಯಸ್ಯರಿಗೆ ಹೆಚ್ಚುವರಿ 5ಜಿಬಿ ಡಾಟಾ: ರಿಲಯನ್ಸ್ ಜಿಯೋ

New delhi| Rajendra| Last Modified ಶನಿವಾರ, 4 ಮಾರ್ಚ್ 2017 (11:45 IST)
ರೂ.99ಕ್ಕೆ ವಾರ್ಷಿಕ ಸದಸ್ಯತ್ವವ ಪಡೆದು ತಿಂಗಳಿಗೆ ರೂ.303 ರೀಚಾರ್ಜ್ ಮಾಡಿಕೊಳ್ಳುವವರಿಗೆ ಹೆಚ್ಚುವರಿ 5ಜಿಬಿ ಡಾಟಾ ಉಚಿತವಾಗಿ ನೀಡುತ್ತೇವೆಂದು ರಿಲಯನ್ಸ್ ಜಿಯೋ ತಿಳಿಸಿದೆ. ಈ ಯೋಜನೆಯಡಿ ಅನಿಯಮಿತ ಕರೆಗಳು, ದಿನಕ್ಕೆ 1 ಜಿಬಿಯಂತೆ 28 ದಿನಗಳಿಗೆ 28 ಜಿಬಿ ಅತ್ಯಧಿಕ ವೇಗದ 4ಜಿ ಡಾಟಾ ಕೊಡುತ್ತೇವೆಂದು ಜಿಯೋ ಪ್ರಕಟಿಸಿದೆ.

ಇದರ ಜತೆಗೆ ಹೆಚ್ಚುವರಿಯಾಗಿ 5ಜಿಬಿ ಡಾಟಾ ನೀಡಲಾಗುತ್ತದೆ ಎಂದು ಕಂಪೆನಿ ಪ್ರಕಟಿಸಿದೆ. ದಿನದಲ್ಲಿ 1 ಜಿಬಿ ಬಳಸಿದ ಮೇಲೆ, ಈ ಡಾಟಾ ಬಳಸಿಕೊಳ್ಳಬಹುದು. ಅದೇ ರೀತಿ ರೂ.499 ರೀಚಾರ್ಜ್ ಮಾಡಿಕೊಂಡವರಿಗೆ ವಾರಕ್ಕೆ 10 ಜಿಬಿ ಹೆಚ್ಚುವರಿ ಡಾಟಾ ಲಭ್ಯವಾಗಲಿದೆ.

ಮೊದಲ ತಿಂಗಳಿಗೆ ಇದು ಅನ್ವಯಿಸಲಿದೆ. 2021ರ ವೇಳೆಗೆ ಅರ್ಧದಷ್ಟು ಮಂದಿ ಗ್ರಾಹಕರು ರಿಲಯನ್ಸ್ ಜಿಯೋ ಬಳಕೆದಾರರಾಗಿರುತ್ತಾರೆ. ಆದಾಯ ರೂ.3 ಲಕ್ಷ ಕೋಟಿಯಷ್ಟಾಗಲಿದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :