ನವದೆಹಲಿ: ಟೆಲಿಕಾಂ ಸಂಸ್ಥೆಗಳ ದರ ಸ್ಪರ್ಧೆ ಇನ್ನೂ ಮುಂದುವರಿದಿದೆ. ಏರ್ ಟೆಲ್ ಮತ್ತು ಜಿಯೋ ಸಂಸ್ಥೆಗಳಿಗೆ ಸೆಡ್ಡು ಹೊಡೆಯಲು ವೊಡಾಫೋನ್ ಹೊಸದೊಂದು ಪ್ಲ್ಯಾನ್ ಹೊರತಂದಿದೆ.ಕೇವಲ 349 ರೂ. ಗೆ 3 ಜಿ ಅಥವಾ 4 ಜಿ ಡಾಟಾ 28 ದಿನಗಳ ವ್ಯಾಲಿಡಿಟಿಯೊಂದಿಗೆ ನೀಡಲಿದೆ. ಡೇಟಾ ಜತೆಗೆ ಕರೆ ಉಚಿತವಾಗಿರುತ್ತದೆ. ದಿನಕ್ಕೆ 100 ಎಸ್ ಎಂಎಸ್ ಕೂಡಾ ಉಚಿತವಾಗಿ ನೀಡಲಿದೆ.ಅತ್ತ ಏರ್ ಟೆಲ್, ಕೂಡಾ ಇದೇ ಮೊತ್ತಕ್ಕೆ ಇಂತಹದ್ದೇ ಪ್ಲ್ಯಾನ್ ಹೊರತಂದಿದೆ.