Widgets Magazine

ಮಾರುಕಟ್ಟೆಗೆ ರತನ್ ಟಾಟಾ ಕನಸಿನ ಕಾರು

New Delhi| Rajendra| Last Modified ಗುರುವಾರ, 2 ಮಾರ್ಚ್ 2017 (17:55 IST)
ಟಾಟಾ ಮೋಟಾರ್ಸ್‌ನ ಜಾಗ್ವಾರ್ ಲ್ಯಾಂಡ್ ರೋವರ್ ಗುರುವಾರ ಮಾರುಕಟ್ಟೆಗೆ ಹೊಸ ಮಾಡೆಲ್ "ವೆಲಾರ್" ಕಾರನ್ನು ಬಿಡುಗಡೆ ಮಾಡಿದೆ. ಲ್ಯಾಂಡ್ ರೋವರ್ ಮುಖ್ಯ ಡಿಸೈನ್ ಅಧಿಕಾರಿ ಮೆಕ್‌ ಗವರ್ನ್ ಮಾತನಾಡುತ್ತಾ, ಈ ಕಾರನ್ನು ಮಾರುಕಟ್ಟೆಗೆ ತಂದ ಘನತೆ ಟಾಟಾ ಗ್ರೂಪ್ ಗೌರವ ಮುಖ್ಯಸ್ಥ ರತನ್ ಟಾಟಾಗೆ ಸಲ್ಲುತ್ತದೆ ಎಂದಿದ್ದಾರೆ.

"ರತನ್ ಟಾಟಾಗೆ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ವೆಲಾರ್ ಮಾಡೆಲ್ ಡಿಸೈನ್ ನೋಡಿದಾಗಿನಿಂದ ಈ ಕಾರಿನ ಮೇಲೆ ಅವರು ವಿಶೇಷ ಆಸಕ್ತಿ ತೋರಿಸಿದ್ದರು" ಎಂದಿದ್ದಾರೆ ಮೆಕ್ ಗವರ್ನ್. ಭಾರತ ಸೇರಿದಂತೆ ಜಗತ್ತಿನಾದ್ಯಂತ ಇರುವ ಗ್ರಾಹಕರಿಗೆ ಈ ಕಾರು ಲಭ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

ಇಂಗ್ಲೆಂಡ್‌ನಲ್ಲಿನ ವೆಸ್ಟ್ ಮಿಡ್‌ಲ್ಯಾಂಡ್ಸ್‌ನಲ್ಲಿನ ಜೆಎಲ್ಆರ್ ಘಟಕದಲ್ಲಿ ಈ ಹೊಸ ವಾಹನನ್ನು ತಯಾರಿಸಿರುವುದಾಗಿ ಅವರು ವೆಲಾರ್ ಕಾರಿನ ಬಗ್ಗೆ ವಿವರ ನೀಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :