Widgets Magazine

ಅಮೆರಿಕಾದಲ್ಲಿ ಜೋಯ್ ಅಲುಕ್ಕಾಸ್ 3ನೇ ಶೋರೂಂ

New Delhi| Rajendra| Last Modified ಗುರುವಾರ, 16 ಫೆಬ್ರವರಿ 2017 (13:39 IST)
ಪ್ರಮುಖ ಆಭರಣ ಮಾರಾಟ ಮಳಿಕೆ ಜೋಯ್ ಅಲುಕ್ಕಾಸ್ ಅಮೆರಿಕಾದಲ್ಲಿ ಮೂರನೇ ಶೋರೂಂ ಆರಂಭಿಸಿದೆ. ಈ ತಿಂಗಳ 4ರಂದು ಶಿಕಾಗೋದ ಜಾಕಬ್ ಅಂಗಾದಿಯಾತ ಸಮ್ಮುಖದಲ್ಲಿ ಅಮೆರಿಕಾ ಕಾಂಗ್ರೆಸ್ ಪ್ರತಿನಿಧಿ ರಾಜಾ ಕೃಷ್ಣಮೂರ್ತಿ ಜೋಯ್ ಅಲುಕ್ಕಾಸ್ ಶೋರೂಂ ಆರಂಭಿಸಿದ್ದಾರೆ.

ಈ ಕಾರ್ಯಕ್ರಮದಲ್ಲಿ ಕೆಸಿಸಿಎನ್ಎ ಅಧ್ಯಕ್ಷ ಅನಿಯನ್ ಜಾರ್ಜ್, ಜೋಯ್ ಅಲುಕ್ಕಾಸ್ ಯುಎಸ್ಎ ಆಪರೇಷನ್ಸ್ ಪ್ರಧಾನ ವ್ಯವಸ್ಥಾಪಕ ಫ್ರಾನ್ಸಿ ಪಿವಿ ಪಾಲ್ಗೊಂಡಿದ್ದರು. ತನ್ನ ಕಾರ್ಯಕ್ಷೇತ್ರವನ್ನು ವಿಸ್ತರಿಸುವ ಭಾಗವಾಗಿ ಅಮೆರಿಕದ ಹೂಸ್ಟನ್, ನ್ಯೂಜೆರ್ಸಿಗಳಲ್ಲಿ ಶೋರೂಂಗಳನ್ನು ತಿಂಗಳ ಅಂತರದಲ್ಲಿ ಶಿಕಾಗೋದಲ್ಲಿ ಶೋರೂಂ ಆರಂಭಿಸಲಾಗಿದೆ.

ಕೇರಳ ಕೊಚ್ಚಿ ಮೂಲದ ಐಎಸ್ಒ ಪ್ರಮಾಣೀಕೃತ ಆಭರಣ ಸಮೂಹ ಕಂಪೆನಿ ಇದು. ಒಂಬತ್ತು ದೇಶಗಳಲ್ಲಿ 105 ವ್ಯಾಪಾರಿ ಮಳಿಗೆಗಳನ್ನು ಜೋಯ್ ಅಲುಕ್ಕಾಸ್ ಹೊಂದಿದೆ. ಈ ಸಮೂಹದಲ್ಲಿ ಸುಮಾರು 8,000 ಮಂದಿ ಉದ್ಯೋಗಿಗಳಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :