Widgets Magazine

ಬಿಎಸ್ 4 ಕೆಟಿಎಂ ಬೈಕಲ್‍ಗಳ ದಾಂಗುಡಿ

New Delhi| Rajendra| Last Modified ಶುಕ್ರವಾರ, 24 ಫೆಬ್ರವರಿ 2017 (12:26 IST)
ಪರಿಸರ ಮಾಲಿನ್ಯ ಉಂಟು ಮಾಡದ ಕೆಟಿಎಂ ದ್ವಿಚಕ್ರ ವಾಹನಗಳನ್ನು ಬಜಾಜ್ ಆಟೋ ಬಿಡುಗಡೆ ಮಾಡಿದೆ. ಬಿಎಸ್ 4 ಮಾನದಂಡಗಳೊಂದಿಗೆ ಡ್ಯೂಕ್-390, 250, 200 ಬೈಕ್‌ಗಳನ್ನು ಬಿಡುಗಡೆ ಮಾಡಿದೆ. ಡ್ಯೂಕ್-390 ಬೆಲೆ ರೂ.2,25,730, ಡ್ಯೂಕ್-250 ಬೆಲೆ ರೂ.1,73,000, ಡ್ಯೂಕ್-200 ಬೆಲೆ ರೂ.1,40,000 (ಎಕ್ಸ್-ಶೋರೂಂ ಬೆಲೆ ದೆಹಲಿ).
 
ಇವುಗಳ ಬೆಲೆಯನ್ನು ಮೇಲಿನಂತೆ ನಿರ್ಧರಿಸಿರುವುದಾಗಿ ತಿಳಿಸಿದೆ ಕಂಪೆನಿ. ಡ್ಯೂಕ್ ಶ್ರೇಣಿಯಲ್ಲಿ 250 ಹೊಸ ಸೇರ್ಪಡೆಯಾಗಿದೆ. ಯೂರೋಪ್ ಮೂಲದ ಕೆಟಿಎಂನಲ್ಲಿ ಬಜಾಜ್ ಆಟೋ ಕಂಪೆನಿಯಲ್ಲಿ ಶೇ.49ರಷ್ಟು ಪಾಲು ಹೊಂದಿದೆ.
 
ಕಲರ್ ಎಲ್‍ಇಡಿ ಪರದೆ, ಡಿಜಿಟಲ್ ಯುನಿಟ್,  ಬ್ಲ್ಯಾಕ್ ವ್ಹೀಲ್ ಜತೆಗೆ ಆರೇಂಜ್ ಫ್ರಂಟ್ ಫ್ರೇಮ್, ಹ್ಯಾಲೋಜನ್ ಬಲ್ಬ್, ಕ್ಲಚ್ ಮತ್ತು ಬ್ರೇಕ್ ಲೀವರ್ ಅಡ್ಜೆಸ್ಟಬಲ್ ಸೌಲಭ್ಯಗಳನ್ನು ನೀಡಲಾಗಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :