Widgets Magazine

ಲಂಬೋರ್ಗಿನಿ ಅವೆಂಡಾರ್ ಎಸ್ ಬೆಲೆ ರೂ.5.01 ಕೋಟಿ!

New Delhi| Rajendra| Last Modified ಶನಿವಾರ, 4 ಮಾರ್ಚ್ 2017 (11:35 IST)
ಇಟಲಿ ಸೂಪರ್ ಸ್ಫೋರ್ಟ್ಸ್ ಕಾರುಗಳ ದಿಗ್ಗಜ ಲಂಬೋರ್ಗಿನಿ ತನ್ನ ಹೊಚ್ಚಹೊಸ ಅವೆಂಡಾರ್ ಎಸ್ ಎಲ್‌ಪಿ 740-4 ಕೂಪೆ’ಯನ್ನು ಭಾರತ ಮಾರುಕಟ್ಟೆಗೆ ಬಿಡುಗಡೆ ಮಾಡಿದೆ. ಇದರ ಬೆಲೆ ರೂ.5.01 ಕೋಟಿ (ಎಕ್ಸ್‌ಶೋರೂಮ್ ಮುಂಬೈ). ಆಡಿ ಆರ್ 8, ಫೆರಾರಿ ಎಫ್‌ಎಫ್, ಮರ್ಸಿಡೆಸ್ ಎಎಂಜಿ ಜಿಎಲ್ಎಸ್, ಬಿಎಂಡಬ್ಲ್ಯು ಐ8, ಬಿಎಂಡಬ್ಲ್ಯು ಎಂ6ನೊಂದಿಗೆ ಅವೆಂಡಾರ್ ಸ್ಪರ್ಧಿಸಲಿದೆ.

ಇದರ ಗರಿಷ್ಟ ವೇಗ ಗಂಟೆಗೆ 350 ಕಿ.ಮೀ ಎಂಬುದು ವಿಶೇಷ. ಎರಡು ಡೋರ್‌ಗಳು, ಎರಡು ಸೀಟು, 1,10000 ಯೂರೋಗಳು, 400 ಪಿಎಸ್ ಟಾರ್ಕ್ ಇರುವ ಕಾರುಗಳನ್ನು ಎಕ್ಸ್‌ಟ್ರೀಮ್ ಸೂಪರ್ ಸ್ಫೋರ್ಟ್ಸ್ ಕಾರು ವಿಭಾಗದಲ್ಲಿ ಪರಿಗಣಿಸಲಾಗುತ್ತದೆ.

ಸದ್ಯಕ್ಕೆ ಭಾರತದಲ್ಲಿ ತಮಗಿರುವ ಶೇ.10ರಷ್ಟು ಮಾರುಕಟ್ಟೆ ಪಾಲನ್ನು ಶೇ.20-15 ಹೆಚ್ಚಿಸಿಕೊಳ್ಳುತ್ತೇವೆಂದು ಲಂಬೋರ್ಗಿನಿ ಇಂಡಿಯಾ ಮುಖ್ಯಸ್ಥ ಶರದ್ ಅಗರ್ವಾತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಕಂಪೆನಿ ಮಾರಾಟದಲ್ಲಿ ಶೇ.90ರಷ್ಟು ಪಾಲು ಹುರಕಾನ್‌ದು ಎಂದಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :