ಆನ್ಲೈನ್ ದಿಗ್ಗಜ ಅಮೆಜಾನ್ ಕಂಪೆನಿ ಯಾಕೋ ಭಾರತೀಯ ಗ್ರಾಹಕರ ವಿಶ್ವಾಸ ಕಳೆದುಕೊಳ್ಳುತ್ತಿದೆ. ಕೆನಡಾ ಅಮೆಜಾನ್ ವೆಬ್ಸೈಟ್ನಲ್ಲಿ ಭಾರತೀಯ ರಾಷ್ಟ್ರಧ್ವಜ ವಿನ್ಯಾಸದ ಡೋರ್ಮ್ಯಾಟ್ಗಳನ್ನು ಮಾರಾಟಕ್ಕಿಟ್ಟು ವಿವಾದ ಮೈಮೇಲೆ ಎಳೆದುಕೊಂಡ ಬಳಿಕ ಮಹಾತ್ಮಾಗಾಂಧಿ ಚಿತ್ರವಿರುವ ಚಪ್ಪಲಿಯನ್ನು ಮಾರಾಟಕ್ಕಿಟ್ಟು ಛೀಮಾರಿ ಹಾಕಿಸಿಕೊಂಡಿದ್ದು ಗೊತ್ತೇ ಇದೆ. ಕೇಂದ್ರ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಸುಷ್ಮಾ ಸ್ವರಾಜ್ ಮಧ್ಯ ಪ್ರವೇಶಿಸಿದ ಬಳಿಕ ಅಮೆಜಾನ್ ಕ್ಷಮಾಪಣೆ ಕೇಳಿತ್ತು. ಈಗ ಮತ್ತೆ ಅಮೆಜಾನ್ ಇಂಡಿಯಾ ವೆಬ್ಸೈಟ್ನಲ್ಲಿ ವಿಘ್ನೇಶ್ವರ ಚಿತ್ರವಿರುವ