ಬಡವರು, ಆರ್ಥಿಕವಾಗಿ ಹಿಂದುಳಿದವರಿಗೆ ಸೂರು ಕಲ್ಪಿಸಬೇಕೆಂಬ ಕೇಂದ್ರ, ರಾಜ್ಯ ಸರಕಾರಗಳ ಯೋಜನೆಗಳ ಜತೆ ಕೈಜೋಡಿಸುವುದಾಗಿ ಆಭರಣ ಮಾರಾಟ ಕಂಪೆನಿ ಮಲಬಾರ್ ಗ್ರೂಪ್ ಘೋಷಿಸಿದೆ. ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ (ಪಿಎಂಎವೈ) ಹಾಗೂ ರಾಜ್ಯ ಸರಕಾರದ ಯೋಜನೆಗಳಡಿ ಗೃಹ ನಿರ್ಮಾಣಕ್ಕೆ ಆರ್ಥಿಕ ಸಹಾಯ ಮಾಡುವುದಾಗಿ ಮಲಬಾರ್ ಗ್ರೂಪ್ ಮುಖ್ಯಸ್ಥ ಎಂ.ಪಿ ಅಹ್ಮದ್ ತಿಳಿಸಿದ್ದಾರೆ. ಕಾರ್ಪೊರೇಟ್ ಸಾಮಾಜಿಕ ಜವಾಬ್ದಾರಿಯಡಿ (ಸಿಎಸ್ಆರ್) ಕಂಪೆನಿ ತನ್ನ ಲಾಭದಲ್ಲಿ ಶೇ.5ರಷ್ಟು ಇದಕ್ಕಾಗಿ ಖರ್ಚು ಮಾಡಲಿದೆ. ಮಲಬಾರ್