Widgets Magazine

ಟಿಕ್​ ಟಾಕ್ ಬ್ಯಾನ್ ಆದ ಮೇಲೂ ಈ ಆ್ಯಪ್​ ಅನ್ನು ಡೌನ್​ಲೋಡ್ ಮಾಡಿಕೊಂಡವರೆಷ್ಟು ಮಂದಿ ಗೊತ್ತಾ?

ನವದೆಹಲಿ| pavithra| Last Modified ಭಾನುವಾರ, 21 ಏಪ್ರಿಲ್ 2019 (13:09 IST)
ನವದೆಹಲಿ : ಚೀನಾದ ಆ್ಯಪ್ ಟಿಕ್​ ಟಾಕ್​ ಅನ್ನು ಭಾರತದಲ್ಲಿ ಬ್ಯಾನ್​ ಮಾಡಿದ ಹಿನ್ನಲೆಯಲ್ಲಿ ಗೂಗಲ್​ ಹಾಗೂ ಪ್ಲೇಸ್ಟೋರ್​ ನಲ್ಲಿ ಟಿಕ್​ ಟಾಕ್ ಅನ್ನು ಡಿಲೀಟ್ ಮಾಡಲಾಗಿದೆ. ಆದರೆ ಟಿಕ್ ​ಟಾಕ್​ ಅಭಿಮಾನಿಗಳಂತೂ ಈ
ಆ್ಯಪ್​ ಅನ್ನು ಡೌನ್ ​ಲೋಡ್​ ಮಾಡಿಕೊಳ್ಳುತ್ತಿದ್ದಾರೆ.ಹೌದು. ಗೂಗಲ್​ ಹಾಗೂ ಪ್ಲೇಸ್ಟೋರ್​ ನಲ್ಲಿ ಟಿಕ್​ ಟಾಕ್ ಅನ್ನು ಡಿಲೀಟ್ ಮಾಡಿದ ನಂತರ ಸಾಕಷ್ಟು ಜನರು ಗೂಗಲ್​ ಮತ್ತು ಪ್ಲೇ ಸ್ಟೋರ್ ​ನಲ್ಲಿ ಟಿಕ್​ ಟಾಕ್​ ಆ್ಯಪ್ ​ಗೆ ಸಾಕಷ್ಟು ಹುಡುಕಾಟ ನಡೆಸುತ್ತಿದ್ದಾರೆ. ಗೂಗಲ್​ ಟ್ರೆಂಡ್​ ಮಾಹಿತಿ ಪ್ರಕಾರ ಇತ್ತೀಚೆಗೆ
‘‘ ಟಿಕ್​ ಟಾಕ್​ ಡೌನ್​ಲೋಡ್​‘‘ ಎಂಬ ಪದವು ಗೂಗಲ್​ ಪೇಜ್ ​ನಲ್ಲಿ ಅಧಿಕವಾಗಿ ಹುಡುಕಾಟ ನಡೆಸಲ್ಪಟ್ಟ ಪದವಾಗಿದೆ.


ಅಷ್ಟೇ ಅಲ್ಲದೇ ಕೆಲವರು ಟಿಕ್​ ಟಾಕ್​ ಅನ್ನು ಶೇರ್​ ಇಟ್​ ಮೂಲಕ ಬಳಸಿಕೊಳ್ಳುತ್ತಿದ್ದಾರೆ. ಇನ್ನೂ ಕೆಲವರು ಗೂಗಲ್ ​ನಲ್ಲಿ ದೊರಕುವ ಆ್ಯಂಡ್ರಾಯ್ಡ್​ ಆ್ಯಪ್​ ಸ್ಟೋರ್​ ‘ಎಪಿಕೆ ಮಿರರ್‘​​ನಿಂದ ಟಿಕ್​ಟಾಕ್​ ಆ್ಯಪ್​ ಅನ್ನು ಡೌನ್​ಲೋಡ್​ ಮಾಡಿಕೊಳ್ಳುತ್ತಿದ್ದಾರೆ. ಏ.19 ರಂದು 1,346 ಜನರು ಟಿಕ್​ ಟಾಕ್​ ಆ್ಯಪ್​ ಅನ್ನು ಡೌನ್​ಲೋಡ್ ಮಾಡಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :