ಫೇಸ್ಬುಕ್ ಸೃಷ್ಟಿಕರ್ತ ಜುಕರ್ಬರ್ಗ್ ಇತ್ತೀಚೆಗೆ ಹೊಸ ಸವಾಲು ಹಾಕಿದ್ದಾರೆ. ಯಾರಿಗೆ ಅಂತಿದ್ದೀರಾ? ಸ್ವತಃ ಅವರಿಗೇ ಹಾಕಿಕೊಂಡಿದ್ದಾರೆ. ಪ್ರತಿ ವರ್ಷ ಒಂದು ಹೊಸ ಸವಾಲನ್ನು ಇಟ್ಟುಕೊಂಡು ಕೆಲಸ ಮಾಡುವುದು ಅವರ ಶೈಲಿ. 2017 ಮುಗಿಯುವುದರೊಳಗೆ ಅಮೆರಿಕಾದ ಪ್ರತಿ ರಾಜ್ಯದಲ್ಲೂ ಕೆಲವು ವ್ಯಕ್ತಿಗಳನ್ನು ವೈಯಕ್ತಿಕವಾಗಿ ಭೇಟಿ ಆಗಬೇಕೆಂದು ನಿರ್ಧರಿಸಿದ್ದಾರೆ. ಕಳೆದ ವರ್ಷ ತನ್ನ ಮನೆಗೆ ಕೃತಿಕ ಬುದ್ಧಿಮತ್ತೆ ಅಳವಡಿಸುವುದು, ಮಾಂಡರಿನ್ ಭಾಷೆ ಕಲಿಯುವುದು, 25 ಪುಸ್ತಕಗಳನ್ನು ಓದುವುದು, 587 ಕಿ.ಮೀ ಓಡುವಂತ