Widgets Magazine

ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಭರ್ಜರಿ ಮಾರಾಟ

New Delhi| Rajendra| Last Modified ಗುರುವಾರ, 26 ಜನವರಿ 2017 (10:40 IST)
ಡಿಸೆಂಬರ್‌ನಲ್ಲಿ ಮುಕ್ತಾಯವಾದ ತ್ರೈಮಾಸಿಕದಲ್ಲಿ ಮಾರುತಿ ಸುಜುಕಿ ಇಂಡಿಯಾ ಭರ್ಜರಿ ಮಾರಾಟ ಕಂಡಿದೆ. ಅಕ್ಟೋಬರ್-ಡಿಸೆಂಬರ್ ನಡುವೆ ಕಂಪೆನಿ ನಿಖರ ಲಾಭ ಶೇ.47.46ರಷ್ಟು ಹೆಚ್ಚಾಗಿದ್ದು ಸ್ಟ್ಯಾಂಡ್‍ಅಲೋನ್ ಪದ್ಧತಿಯಲ್ಲಿ ರೂ.1,744 ಕೋಟಿ ಗಳಿಸಿದೆ.

ಹೈ ಎಂಡ್ ಮಾಡೆಲ್ ಕಾರುಗಳ ಮಾರಾಟ ಹೆಚ್ಚಾಗಿರುವುದು, ಪ್ರಚಾರದ ಖರ್ಚು ಕಡಿಮೆಯಾಗಿದ್ದು, ವ್ಯಯ ನಿಯಂತ್ರಣದಿಂದ ಇದು ಸಾಧ್ಯವಾಗಿದೆ ಎಂದು ಕಂಪೆನಿ ಪ್ರಕಟಣೆಯಲ್ಲಿ ತಿಳಿಸಿದೆ. ಕಳೆದ ವರ್ಷ ಇದೆ ತ್ರೈಮಾಸಿಕದಲ್ಲಿ ರೂ.1,183 ಕೋಟಿಗಳಷ್ಟಿತ್ತು.

ಮೂರನೇ ತ್ರೈಮಾಸಿಕದಲ್ಲಿ ಕಂಪೆನಿ ಒಟ್ಟಾರೆ ಆದಾಯ ರೂ.19,173.1 ಕೋಟಿಗೆ ತಲುಪಿದೆ. ಇದಕ್ಕೂ ಮೊದಲು ಇದೇ ಸಮಯದಲ್ಲಿ ರೂ.19,957.6 ಕೋಟಿ ಮಾತ್ರ ಗಳಿಕೆ ಇತ್ತು. ಈ ಬಾರಿ ಶೇ.3.5ರಷ್ಟು ವೃದ್ಧಿಯೊಂದಿಗೆ 3,87,251 ವಾಹನಗಳನ್ನು ಮಾರಾಟ ಮಾಡಲಾಗಿದೆ. ಅದೇ ರೀತಿ 30,748 ವಾಹನಗಳನ್ನು ರಫ್ತು ಮಾಡಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :