ಹೈದರಾಬಾದ್ : ವಾಹನ ಸಂಖ್ಯೆ ಹೆಚ್ಚುತ್ತಿರುವ ಈ ದಿನಗಳಲ್ಲಿ ಪೆಟ್ರೋಲ್ ಸಮಸ್ಯೆ ಕೂಡ ಹೆಚ್ಚಾಗುತ್ತಿದೆ. ಇಂತಹ ಸಮಯದಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಒಬ್ಬರು ಪ್ಲಾಸ್ಟಿಕ್ ನಿಂದ ಪೆಟ್ರೋಲ್ ಸಿದ್ಧಪಡಿಸುವ ಪ್ರಕ್ರಿಯೆಯನ್ನು ಕಂಡುಹಿಡಿದಿದ್ದಾರೆ. ಹೈದರಾಬಾದ್ ನಿವಾಸಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ ಸತೀಶ್ ಎಂಬುವವರು ಹೈಡ್ರಾಕ್ಸಿ ಪ್ರೈವೇಟ್ ಲಿಮಿಟೆಡ್ ಹೆಸರಿನ ಕಂಪನಿಯನ್ನು ಶುರು ಮಾಡಿದ್ದು, ಅಲ್ಲಿ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ಸಿದ್ದಪಡಿಸುತ್ತಾರಂತೆ. ಇವರು ಮೂರು ಹಂತದ ಪ್ರಕ್ರಿಯೆ ಮೂಲಕ ಪ್ಲಾಸ್ಟಿಕ್ ನಿಂದ ಪೆಟ್ರೋಲ್ ತಯಾರಿಸುತ್ತಿದ್ದು,