ಸಾಮಾನ್ಯವಾಗಿ 3000 ಎಂಎಎಚ್ ಬ್ಯಾಟರಿ ಸಾಮರ್ಥ್ಯದ ಫೋನ್ ಸಂಪೂರ್ಣ ಚಾರ್ಜ್ ಮಾಡಬೇಕಾದರೆ ಎಷ್ಟು ಸಮಯ ಹಿಡಿಸುತ್ತದೆ? ಸುಮಾರು 2 ಗಂಟೆ ಆಗಬಹುದು. ಸೂಕ್ತ ಚಾರ್ಜರ್ನೊಂದಿಗೆ, ವೇಗವಾಗಿ ಚಾರ್ಚ್ ಮಾಡಬಹುದಾದ ಫೀಚರ್ವುಳ್ಳ ಸ್ಮಾರ್ಟ್ಫೋನನ್ನು ತರುತ್ತಿವೆ ಕಂಪೆನಿಗಳು. ಚೀನಾ ಮೂಲದ ಪ್ರಮುಖ ಫೋನ್ ತಯಾರಿ ಕಂಪೆನಿ ಮಿಜೂ ಹೊಸದಾಗಿ ಬಿಡುಗಡೆ ಮಾಡಿರುವ ಸ್ಮಾರ್ಟ್ಫೋನ್ ಕೇವಲ 20 ನಿಮಿಷಗಳಲ್ಲಿ ಸಂಪೂರ್ಣ ಚಾರ್ಜ್ ಆಗುತ್ತದೆ. ವರ್ಲ್ಡ್ ಮೊಬೈಲ್ ಕಾಂಗ್ರೆಸ್ ಸಂದರ್ಭದಲ್ಲಿ ಮಿಜೂ ಈ ಫೋನನ್ನು