ಮೈಕ್ರೋ ಸಾಫ್ಟ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಓ) ಸತ್ಯ ನಾದೆಳ್ಳ ಅವರು ಈ ತಿಂಗಳ ಕೊನೆಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ. ಕಂಪೆನಿ ನಿರ್ವಹಿಸುತ್ತಿರುವ ಫ್ಯೂಚರ್ ಡೀಕೋಡೆಡ್ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗಲಿದ್ದಾರೆ. ಮುಂಬೈನಲ್ಲಿ ಈ ತಿಂಗಳ 21, 22ರಂದು ಕಾರ್ಯಕ್ರಮ ನಡೆಯಲಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಎಚ್1 ಬಿ ವೀಸಾಗಳ ಬಗ್ಗೆ ತಳೆದಿರುವ ಧೋರಣೆಯ ಹಿನ್ನೆಲೆಯಲ್ಲಿ ನಾದೆಳ್ಳ ಅವರ ಆಗಮನ ಉದ್ಯಮ ವಲಯದಲ್ಲಿ ಸಾಕಷ್ಟು ಕುತೂಹಲ ಉಂಟು ಮಾಡಿದೆ.