Widgets Magazine

ಆನ್‌ಲೈನ್‌ನಲ್ಲಿ ಹವಾ ಎಬ್ಬಿಸುತ್ತಿರುವ ಲೆನೋವೋ ಫೋನ್

New Delhi| Rajendra| Last Modified ಭಾನುವಾರ, 26 ಫೆಬ್ರವರಿ 2017 (20:04 IST)
ಲೆನೋವೋ ಬಿಡುಗಡೆ ಮಾಡಲಿರುವ ಮೋಟೋ ಜಿ5, ಪ್ಲಸ್ ಫೋಟೋಗಳು ಕಳೆದ ಕೆಲವು ದಿನಗಳಿಂದ ಆನ್‍ಲೈನ್‌ನಲ್ಲಿ ದರ್ಶನ ನೀಡುತ್ತಿವೆ. ಇತ್ತೀಚೆಗೆ ಈ ಫೋನ್‍ಗೆ ಸಂಬಂಧಿಸಿದಂತೆ ಲೈವ್ ಚಿತ್ರಗಳು ಆನ್‍ಲೈನ್‌ನಲ್ಲಿ ಬಿಡುಗಡೆಯಾಗಿದ್ದು, ಆ ಫೋನ್ ಬಗ್ಗೆ ಸ್ಪಷ್ಟವಾದ ಚಿತ್ರಣ ಸಿಕ್ಕಂತಾಗಿದೆ.

ಮೊಬೈಲ್ ವರ್ಲ್ಡ್ ಕಾಂಗ್ರೆಸ್ 2017ರ ಸಂದರ್ಭದಲ್ಲಿ ಈ ಫೋನ್ ಫೆಬ್ರವರಿ 26ಕ್ಕೆ ಬಿಡುಗಡೆಯಾಗಿದೆ. ಈ ಎರಡು ಫೋನ್‌ಗಳಿಗೆ ಸಂಬಂಧಿಸಿದ ಫೋನ್ ವಿಶೇಷತೆಗಳು ಈ ರೀತಿ ಇವೆ.

ಮೋಟೋ ಜಿ5 ವಿಶೇಷತೆಗಳು
* 5 ಇಂಚಿನ ಸ್ಪರ್ಶ ಸಂವೇದಿ ಪರದೆ
* 1.4 ಗಿಗಾ ಹಡ್ಜ್ ಆಕ್ಟಾ ಕೋರ್ ಪ್ರೋಸೆಸರ್
* 2 ಜಿಬಿ, 3ಜಿಬಿ ರ‍್ಯಾಮ್
* 16ಜಿಬಿ, 32ಜಿಬಿ ಆಂತರಿಕ ಮೆಮೊರಿ
* 12 ಮೆಗಾಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 5 ಮೆಗಾಪಿಕ್ಸೆಲ್ ಮುಂಬದಿ ಕ್ಯಾಮೆರಾ
* ಆಂಡ್ರಾಯ್ಡ್ 7.0 ನೂಗಟ್
* 2800 ಎಂಎಎಚ್ ಬ್ಯಾಟರಿ

ಮೋಟೋ ಜಿ5 ಪ್ಲಸ್ ವಿಶೇಷತೆಗಳು
* 5.2 ಇಂಚಿನ ಸ್ಪರ್ಶಸಂವೇದಿ ಪರದೆ
* 2 ಗಿಗಾ ಹಡ್ಜ್ ಪ್ರೋಸೆಸರ್
* 13 ಮೆಗಾ ಪಿಕ್ಸೆಲ್ ಹಿಂಬದಿ ಕ್ಯಾಮೆರಾ
* 5 ಮೆಗಾ ಪಿಕ್ಸೆಲ್ ಮುಂಬದಿ ಕ್ಯಾಮೆರಾ
* ಆಂಡ್ರಾಯ್ಡ್ 7.0 ನೂಗಟ್
* 3000 ಎಂಎಎಚ್ ಬ್ಯಾಟರಿ ಸಾಮರ್ಥ್ಯ

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :