Widgets Magazine

ಆಪಲ್ ಐಫೋನ್ 8 ಬುಕ್ ಮಾಡಿದ ಮುಂಬೈ ಇಂಜಿನಿಯರ್‌ಗೆ ಕಾದಿತ್ತು ಬಿಗ್ ಶಾಕ್

ಮುಂಬೈ| ರಾಮಕೃಷ್ಣ ಪುರಾಣಿಕ| Last Modified ಶನಿವಾರ, 3 ಫೆಬ್ರವರಿ 2018 (13:20 IST)
ಬುಕ್ ಮಾಡಿದ ಮುಂಬೈ ಇಂಜಿನಿಯರ್‌ಗೆ ಆಪಲ್ ಐಫೋನ್ 8 ಬದಲಿಗೆ ಸೋಪ್ ಬಾರ್ ಅನ್ನು ವಿತರಿಸಿದ ಫ್ಲಿಪ್‌ಕಾರ್ಟ್ ಆನ್‌ಲೈನ್ ಖರೀದಿದಾರರಿಗೆ ಮತ್ತೊಂದು ಆಘಾತಕಾರಿ ಸುದ್ದಿ ನೀಡಿದೆ.
ಮಹತ್ವಾಕಾಂಕ್ಷೆಯಿಂದ ಮೊಬೈಲ್ ಹ್ಯಾಂಡ್‌ಸೆಟ್ ಖರೀದಿಸಲು ರೂ. 55,000 ಪಾವತಿಸಿದ 26 ವರ್ಷದ ತಬ್‌ರೇಜ್ ಮೆಹಬೂಬ್ ನಗ್ರಾಲಿಗೆ ದೊಡ್ಡ ಆಘಾತ ಕಾದಿತ್ತು, ಕಾರಣ ಇ-ಟೈಲಿಂಗ್‌ನಲ್ಲಿ ಪ್ರಮುಖವಾಗಿರುವ ಫ್ಲಿಪ್‌ಕಾರ್ಟ್ ಫೋನ್ ಬದಲಿಗೆ ಡಿಟರ್ಜೆಂಟ್ ಬಾರ್ ಅನ್ನು ವಿತರಿಸಿದ್ದರು.
 
ಸಾಫ್ಟ್‌ವೇರ್ ಇಂಜಿನಿಯರ್ ಆದ ನಾಗ್ರಾಲಿ, ನಗರದ ಪೊಲೀಸರ ಬಳಿ ಹೋಗಿದ್ದಾನೆ ಮತ್ತು ಸಾಫ್ಟ್‌ಬ್ಯಾಂಕ್ ಬೆಂಬಲಿತ 17 ಬಿಲಿಯನ್ ಯುಎಸ್ ಡಾಲರ್ ಮೌಲ್ಯದ ಫ್ಲಿಪ್‌ಕಾರ್ಟ್ ವಿರುದ್ಧ ಬೈಕುಲ್ಲಾ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಿಸಿದ್ದಾನೆ. ತನ್ನ ದೂರಿನಲ್ಲಿ, ಆತ ಶಾಪಿಂಗ್ ಪೋರ್ಟಲ್‌ನಲ್ಲಿ ಐಫೋನ್ -8 ಗೆ ಆರ್ಡರ್ ಮಾಡಿರುವುದಾಗಿ ಮತ್ತು 55,000 ರೂ. ಪೂರ್ಣ ಪಾವತಿ ಮಾಡಿರುವುದಾಗಿ ಹೇಳಿದ್ದಾನೆ.
 
ಜನವರಿ 22 ರಂದು, ನವೀ ಮುಂಬಯಿಯಲ್ಲಿರುವ ಪನ್ವೆಲ್‌ನಲ್ಲಿರುವ ಅವರ ಮನೆಯಲ್ಲಿ ಮೊಬೈಲ್ ಫೋನ್‌ನ ಬದಲಿಗೆ ಡಿಟರ್ಜೆಂಟ್ ಬಾರ್ ಹೊಂದಿರುವ ಪ್ಯಾಕೇಜ್ ಅನ್ನು ವಿತರಿಸಲಾಗಿದೆ. "ನಾಗ್ರಾಲಿ ಅವರು ನಿನ್ನೆ ನಮಗೆ ದೂರು ನೀಡಿದ್ದಾರೆ ಮತ್ತು ಫ್ಲಿಪ್‌ಕಾರ್ಟ್ ವಿರುದ್ಧ ವಂಚನೆ ಅಪರಾಧದ ಪ್ರಕರಣವನ್ನು ದಾಖಲಿಸಲಾಗಿದೆ" ಎಂದು ಬೈಕುಲ್ಲಾ ಪೊಲೀಸ್ ಠಾಣೆಯ ಹಿರಿಯ ಪೊಲೀಸ್ ಇನ್ಸ್‌ಪೆಕ್ಟರ್ ಅವಿನಾಶ್ ಶಿಂಗ್ಟೆ ಅವರು ಇಂದು ಪಿಟಿಐಗೆ ಹೇಳಿದ್ದಾರೆ.
 
ಫ್ಲಿಪ್‌ಕಾರ್ಟ್ ವಕ್ತಾರರನ್ನು ಸಂಪರ್ಕಿಸಿದಾಗ, ಇ-ಟೈಲರ್ ಗ್ರಾಹಕರ ವಿಶ್ವಾಸದ ಮೇಲೆ ಪರಿಣಾಮ ಬೀರುವ ಘಟನೆಗಳ ಕುರಿತು ಶೂನ್ಯ-ಸಹಿಷ್ಣುತೆ ನೀತಿಯನ್ನು ಹೊಂದಿದೆ ಎಂದು ಹೇಳಿದರು ಮತ್ತು "ನಾವು ಈ ಘಟನೆಯನ್ನು ತನಿಖೆ ಮಾಡುತ್ತಿದ್ದೇವೆ ಮತ್ತು ಈ ಘಟನೆಯನ್ನು ಆದಷ್ಟು ಬೇಗ ಪರಿಹರಿಸುತ್ತೇವೆ." ಎಂದು ಹೇಳಿದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :