Widgets Magazine

ನೀರವ್ ಮೋದಿಯ ದುಬಾರಿ ವಾಚುಗಳು ಜಪ್ತಿ!

ಬೆಂಗಳೂರು| ಗುರುಮೂರ್ತಿ| Last Modified ಶನಿವಾರ, 24 ಫೆಬ್ರವರಿ 2018 (18:29 IST)
ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ಗೆ ₹11,344 ಕೋಟಿ ವಂಚನೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನೀರವ್‌ ಮೋದಿಗೆ ಸೇರಿದ ಒಂಬತ್ತು ದುಬಾರಿ ಬೆಲೆಯ ವಾಚುಗಳನ್ನು ಶುಕ್ರವಾರ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಜಪ್ತಿ ಮಾಡಿದ್ದಾರೆ.
ಜಾರಿ ನಿರ್ದೇಶನಾಲಯ 176 ಉಕ್ಕಿನ ಅಲ್ಮಿರಾಗಳು ಮತ್ತು 60 ಬಾಕ್ಸ್‌ಗಳಲ್ಲಿ ತುಂಬಿದ್ದ ದುಬಾರಿ ಬೆಲೆಯ ವಾಚ್‌ಗಳನ್ನು ಒಂದು ಬೃಹತ್ ಪ್ರಮಾಣವನ್ನು ಸಹ ಪಡೆದುಕೊಂಡಿದೆ.
 
ಶುಕ್ರವಾರವೂ ದಾಳಿ ಮುಂದುವರಿಸಿದ ಅಧಿಕಾರಿಗಳು, ದುಬಾರಿ ವಾಚ್‌ಗಳು ಹಾಗೂ ವಿದೇಶದಿಂದ ಆಮದು ಮಾಡಿಕೊಂಡಿದ್ದ ಗೃಹಾಲಂಕಾರಿಕ ವಸ್ತುಗಳನ್ನು ವಶಪಡಿಕೊಂಡಿದ್ದಾರೆ. ಇವುಗಳ ಮೌಲ್ಯ ₹44 ಕೋಟಿ ಇರಬಹುದೆಂದು ಅಂದಾಜಿಸಲಾಗಿದೆ.
 
ಒಂಬತ್ತು ದಿನಗಳಿಂದ ಅಧಿಕಾರಿಗಳು ನಡೆಸುತ್ತಿರುವ ಶೋಧ ಕಾರ್ಯ ಇನ್ನೂ ಮುಂದುವರಿದಿದ್ದು, ಈಗಾಗಲೇ ಅಧಿಕ ಬೆಲೆಯ ಒಂಬತ್ತು ಐಷಾರಾಮಿ ಕಾರುಗಳು, ಆಪಾರ ಪ್ರಮಾಣದ ಚಿನ್ನಾಭರಣ, ನಗದು ಮತ್ತು ಆಸ್ತಿಯನ್ನು ವಶಪಡಿಸಿಕೊಂಡಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :