ಫೋರ್ಡ್‌ನಿಂದ ನೂತನ ಅವೃತ್ತಿಯ ಕಾರ್ ಮಾರುಕಟ್ಟೆಗೆ

ಬೆಂಗಳೂರು| ಗುರುಮೂರ್ತಿ| Last Updated: ಬುಧವಾರ, 10 ಜನವರಿ 2018 (19:56 IST)
ಭಾರತದ ಮಾರುಕಟ್ಟೆಯಲ್ಲಿ ಇತ್ತೀಚಿಗೆ ಸಂಚಲನ ಮೂಡಿಸುತ್ತಿರುವ ಅಮೇರಿಕಾ ಮೂಲಕ ಫೋರ್ಡ್ ಕಂಪನಿ ಈ ವರ್ಷ ತನ್ನ ನೂತನ ಆವೃತ್ತಿಯ ಕಾರ್‌ ಅನ್ನು ಮಾರುಕಟ್ಟೆಗೆ ತರಲು ಯೋಜನೆ ರೂಪಿಸುತ್ತಿದೆ. 
ಈಗಾಗಲೇ ತನ್ನ ಎಸ್‌ಯುವಿ ಆವೃತ್ತಿಗಳಾದ ಇಕೋಸ್ಫೋರ್ಟ್ಸ್ ಮತ್ತು ಎಂಡೀವರ್ ಕಾರುಗಳು ಮಾರುಕಟ್ಟೆಯಲ್ಲಿ ಯಶಸ್ಸು ಸಾಧಿಸಿದ್ದು, ಇದರ ಬೆನ್ನಲ್ಲೇ ಕಂಪನಿ ಯುರೋಪ ಮಾರುಕಟ್ಟೆಯಲ್ಲಿ ಲಭ್ಯವಿರುವ ಕೂಗಾ ಮಾದರಿಯನ್ನು ಭಾರತಕ್ಕೆ ಪರಿಚಯಿಸಲು ಸಿದ್ಧತೆ ನೆಡೆಸುತ್ತಿದೆ. ಈ ಮೂಲಕ ಭಾರತದಲ್ಲಿ ಜನಪ್ರಿಯಗೊಳ್ಳುತ್ತಿರುವ ಮಧ್ಯಮ ಗಾತ್ರದ ಜೀಪ್ ಕಂಪಾಸ್ ಮಾದರಿಗಳನ್ನು ಹಿಂದಿಕ್ಕುವ ಉದ್ದೇಶವನ್ನು ಕಂಪನಿ ಹೊಂದಿದ್ದು, ಇಕೋಸ್ಫೋರ್ಟ್ಸ್‌ಗಿಂತ ಸ್ವಲ್ಪ ಮಟ್ಟಿಗೆ ಅಧಿಕ ಮತ್ತು ಎಂಡೀವರ್‌ಗಿಂತ ಕೆಳ ದರ್ಜೆಯ ಕಾರು ಇದಾಗಿದೆ.
 
ಸದ್ಯ ವಿದೇಶಿ ಮಾರುಕಟ್ಟೆಯಲ್ಲಿ ಅಷ್ಟೇ ಲಭ್ಯವಿರುವ ಫೋರ್ಡ್ ಕೂಗಾ ಆವೃತ್ತಿಯ ಕಾರುಗಳು ಪೆಟ್ರೋಲ್ ಮತ್ತು ಡೀಸೆಲ್ ಎರಡು ಮಾದರಿಯಲ್ಲೂ ಲಭ್ಯವಿದೆ, ಭಾರತದಲ್ಲಿ ಬಿಡುಗಡೆಯಾಗಲಿರುವ ಕೂಗಾ ಮಾದರಿಯು ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್‌ನ ಜೊತೆಗೆ ಟರ್ಬೋ ಚಾರ್ಜ್ಡ್ ಸೌಲಭ್ಯ ಪಡೆಯಲಿದೆ ಎಂದು ಅಂದಾಜಿಸಲಾಗಿದೆ.
ಇದಲ್ಲದೇ ಫೋರ್ಡ್ ಕೂಗಾ ಮಾದರಿಯ ಎಸ್‌ಯುವಿ ಆಟೋಮೆಟಿಕ್ ಹಾಗೂ ಮ್ಯಾನುವಲ್ ಟ್ರಾನ್ಸ್‌ಮಿಷನ್ ಎರಡು ರೀತಿಯಲ್ಲಿ ಲಭ್ಯವಿದ್ದು, ಉನ್ನತ ದರ್ಜೆಯ ಸುರಕ್ಷತೆಯ ಲಕ್ಷಣಗಳನ್ನು ಇದು ಹೊಂದಿರಲಿದೆ. ಅಲ್ಲದೇ ಇದರಲ್ಲಿ ಇಂಧನ ಬಳಕೆಯುನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುವ ತಂತ್ರಜ್ಞಾನವನ್ನು ಇದು ಹೊಂದಿದ್ದು ಉತ್ತಮ ಮೈಲೇಜನ್ನು ಈ ಕಾರ್‌ನಲ್ಲಿ ನಿರೀಕ್ಷಿಸಬಹುದಾಗಿದೆ. ಇದಲ್ಲದೇ 5 ಸೀಟರ್ ಸೌಲಭ್ಯ ಹೊಂದಿರುವ ಕೂಗಾ ಎಸ್‌ಯುವಿಯು ಫ್ರಂಟ್ ವೀಲ್ಹ್ ಡ್ರೈವ್ ಸಿಸ್ಟಂ ಮತ್ತು ರಿಲ್ ವೀಲ್ಹ್ ಡ್ರೈವ್ ಸಿಸ್ಟಂ ಅಳವಡಿಕೆ ಹೊಂದಿರುವ ಕಾರಣ ವಾಹನ ಚಾಲನೆ ಮಾಡುವಾಗ ಆರಾಮದಾಯಕ ಅನುಭವವನ್ನು ನೀಡುವುದರಲ್ಲಿ ಯಾವುದೇ ಸಂದೇಹವಿಲ್ಲ.
 
ಈ ಕಾರಿನ ಇಂಟಿರಿಯರ್ ಸಿಸ್ಟಂ ಆಕರ್ಷಕವಾಗಿದ್ದು ಸ್ಪಿಡೋ ಮೀಟರ್ ಅನ್ನು ಇದರಲ್ಲಿ ಆಕರ್ಷಕವಾಗಿ ವಿನ್ಯಾಸಡಿಸಲಾಗಿದೆ. ಅಲ್ಲದೇ ಸ್ಟೇರಿಂಗ್ ಲೂಕ್ ಕೂಡಾ ತುಂಬಾ ಆಕರ್ಷಕವಾಗಿದ್ದು ಡ್ಯಾಶ್‌ಬೋರ್ಡ್ ಸೇರಿದಂತೆ ಎಲ್ಲವೂ ತುಂಬಾನೇ ಆಕರ್ಷಣೀಯವಾಗಿದೆ. ಅಲ್ಲದೇ ಆರಾಮದಾಯಕ ಸೀಟುಗಳು ದುರದ ಪ್ರಯಾಣ ಮಾಡುವವರಿಗೆ ಇದು ತುಂಬಾನೇ ಆರಾಮದಾಯಕವಾಗುವಂತೆ ರೂಪಿಸಲಾಗಿದೆ. ಅಲ್ಲದೇ ಈ ಕಾರು 12 ಬಣ್ಣಗಳಲ್ಲಿ ಲಭ್ಯವಿದ್ದು ಟ್ರೆಂಡಿ ಲೂಕ್ ಅನ್ನು ಇದು ಹೊಂದಿದೆ.
 
ಕೂಗಾ ಕಾರಿನ ಬೆಲೆಗಳ ಕುರಿತು ಯಾವುದೇ ನಿಖರವಾದ ಮಾಹಿತಿ ಇಲ್ಲ ಆದರೂ ಮಾರುಕಟ್ಟೆ ಮೂಲಗಳ ಪ್ರಕಾರ ಭಾರತದಲ್ಲಿ ಇದರ ಬೆಲೆ ಸುಮಾರು 12 ರಿಂದ 18 ಲಕ್ಷಗಳವರೆಗೆ ಇರಲಿದೆ ಎಂದು ಅಂದಾಜಿಸಲಾಗಿದೆ.
 
ಒಂದು ವೇಳೆ ಈ ಕಾರು ಭಾರತದ ಮಾರುಕಟ್ಟೆಗೆ ಲಗ್ಗೆ ಇಟ್ಟಲ್ಲಿ ಸದ್ಯ ಎಸ್‌ಯುವಿಗಳಲ್ಲಿ ಜನಪ್ರಿಯವಾಗಿರುವ ಕಾರುಗಳಾದ ಜೀಪ್ ಕಂಪಾಸ್, ಹ್ಯುಂಡೈ ಕ್ರೇಟಾ, ಮಹೀಂದ್ರಾ ಎಕ್ಸ್‌ಯುವಿ 500 ಕಾರುಗಳಿಗೆ ತೀವ್ರ ಪೈಫೋಟಿ ನೀಡಲಿದೆ.
 
ಭಾರತದ ಮಾರುಕಟ್ಟೆಯಲ್ಲಿ ಫೋರ್ಡ್ ಉತ್ಪಾದನೆಯ ಕಾರುಗಳು ಜನಮನ್ನಣೆ ಗಳಿಸಿದ್ದು, ಮುಂದೆ ಬಿಡುಗಡೆ ಮಾಡುವ ಕಾರ್‌‌ಗೆ ಉತ್ತಮ ಮಾರುಕಟ್ಟೆ ಸಿಗಲಿದೆ ಎಂಬುದು ಮಾರುಕಟ್ಟೆ ತಜ್ಞರ ಅಭಿಪ್ರಾಯವಾಗಿದೆ.
 
ಮೂಲಗಳ ಪ್ರಕಾರ ಕೂಗಾ ಪ್ರೀಮಿಯಂ ಮಾದರಿಯ ಕಾರುಗಳು ಈ ವರ್ಷ ಭಾರತದಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇದ್ದು ಕಡಿಮೆ ಬೆಲೆಯಲ್ಲಿ ಉತ್ತಮ ದರ್ಜೆ ಹಾಗೂ ಉತ್ತಮ ವಿನ್ಯಾಸ ಹೊಂದಿರುವ ಕಾರನ್ನು ಕೊಳ್ಳಬೇಕು ಎನ್ನುವವರಿಗೆ ಇದು ಉತ್ತಮವಾದ ಆಯ್ಕೆ ಎಂಬುದರಲ್ಲಿ ಎರಡು ಮಾತಿಲ್ಲ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :