ಭಾರತದ ದ್ವಿಚಕ್ರ ಮಾರುಕಟ್ಟೆಯಲ್ಲಿ ನೂತನ ಬೈಕ್ಗಳ ಅಬ್ಬರ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು ಈಗ ಸಾಕಷ್ಟು ವಿದೇಶಿ ಕಂಪನಿಗಳು ತಮ್ಮ ಬೈಕ್ ಅನ್ನು ಭಾರತದ ಮಾರುಕಟ್ಟೆಗೆ ತರಲು ಮುಂದಾಗುತ್ತಿರುವುದು ಒಳ್ಳೆಯ ವಿಚಾರವೇ ಸರಿ. ಇದರಿಂದ ಬೈಕ್ ಮಾರಾಟದಲ್ಲಿ ಪೈಫೋಟಿ ಉಂಟಾಗುವ ಕಾರಣ ದೇಶಿಯ ಗ್ರಾಹಕರನ್ನು ಸೆಳೆಯಲು ಹಲವಾರು ವಿದೇಶಿ ಕಂಪನಿಗಳು ಭಾರತಕ್ಕೆ ಹೊಂದಿಕೆಯಾಗುವಂತ ಉತ್ಕ್ರಷ್ಟ ಮಾದರಿಯ ಬೈಕ್ಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ.