ಪ್ರಯಾಣಿಕರಿಗಾಗಿ ಹೊಸ ‘ಓಲಾ ಸೆಲ್ಫ್ ಡ್ರೈವ್’ ಸೇವೆ

ಬೆಂಗಳೂರು| pavithra| Last Modified ಸೋಮವಾರ, 21 ಅಕ್ಟೋಬರ್ 2019 (06:33 IST)
ಬೆಂಗಳೂರು : ಓಲಾ ಕಂಪೆನಿ ಪ್ರಯಾಣಿಕರ ಅನುಕೂಲಕ್ಕಾಗಿ ಹೊಸ ಹೊಸ ಸೇವೆಗಳನ್ನು ಜಾರಿಗೆ ತಂದಿದ್ದು, ಇದೀಗ ಪ್ರಯಾಣಿಕರಿಗಾಗಿ ಹೊಸ ‘ಓಲಾ ಸೆಲ್ಫ್ ಡ್ರೈವ್’ ಸೇವೆಯನ್ನು ಪ್ರಾರಂಭಿಸಿದೆ.
ಹೌದು.  ಈ ಸೇವೆಯಿಂದ ಪ್ರಯಾಣಿಕರು ಓಲಾ ಕಾರನ್ನು ಬಾಡಿಗೆ ಪಡೆದು ತಾವೇ ಡ್ರೈವ್ ಮಾಡಿಕೊಂಡು ಹೋಗಬಹುದಾಗಿದೆ. ಅದಕ್ಕಾಗಿ ಓಲಾ ಆ್ಯಪ್ ನಲ್ಲಿ ಪ್ರತ್ಯೇಕ ಆಯ್ಕೆಯನ್ನು ನೀಡಲಿದ್ದು, ಆ್ಯಪ್ ನಲ್ಲಿರುವ ಓಲಾ ಡ್ರೈವ್ ಆಯ್ಕೆಯನ್ನು ಕ್ಲಿಕ್ ಮಾಡಿ ಪ್ರಯಾಣಿಕರು ಕಾರನ್ನು ಬಾಡಿಗೆ ಪಡೆಯಬಹುದಾಗಿದೆ.


ಸದ್ಯಕ್ಕೆ ಈ ಸೇವೆಯನ್ನು ಬೆಂಗಳೂರಿನಲ್ಲಿ ಆರಂಭಿಸಿದ್ದು, ಬಳಿಕ ಹೈದರಾಬಾದ್, ಮುಂಬೈ, ದೆಹಲಿಯಲ್ಲಿ ಪ್ರಾರಂಭಿಸಲು ಚಿಂತನೆ ನಡೆಸಿದೆ. ಹಾಗೇ ಮುಂದಿನ ದಿನಗಳಲ್ಲಿ 250 ಕ್ಕೂ ಅಧಿಕ ನಗರಗಳಲ್ಲಿ ಈ ಸೇವೆಯನ್ನು ಪ್ರಾರಂಭಿಸುವ ಯೋಜನೆ ಹಾಕಿಕೊಂಡಿದೆ. ಅಲ್ಲದೇ ಕಾರು ಲೀಸಿಂಗ್ ಸೇವೆಯನ್ನು ಒದಗಿಸಲು ಓಲಾ ಕಂಪೆನಿ ಪ್ಲ್ಯಾನ್ ಮಾಡಿದೆ ಎನ್ನಲಾಗಿದೆ.

ಇದರಲ್ಲಿ ಇನ್ನಷ್ಟು ಓದಿ :