Widgets Magazine

ಎಟಿಎಂಗಳಲ್ಲಿ ನೋ ಕ್ಯಾಶ್ ಬೋರ್ಡ್ ಕಾಣಿಸುತ್ತಿದೆಯೇ? ಆರ್ ಬಿಐ ಕೊಟ್ಟಿದೆ ಸ್ಪಷ್ಟನೆ

ನವದೆಹಲಿ| Krishnaveni K| Last Modified ಬುಧವಾರ, 18 ಏಪ್ರಿಲ್ 2018 (07:50 IST)

ನವದೆಹಲಿ: ಕಳೆದ ಕೆಲವು ದಿನಗಳಿಂದ ಯಾವ ಎಟಿಎಂ ಕಡೆಗೆ ಹೋದರೂ ನೋ ಕ್ಯಾಶ್ ಎಂಬ ಬೋರ್ಡ್ ಕಾಣಿಸುತ್ತಿದೆಯೇ? ಇದಕ್ಕೆ ಕಾರಣವೇನೆಂದು ಸ್ಪಷ್ಟನೆ ನೀಡಿದೆ.


ಕೆಲವು ಮಾಧ್ಯಮಗಳಲ್ಲಿ ನೋಟಿನ ಕೊರತೆಯಿಂದಾಗಿಯೇ ಈ ರೀತಿಯಾಗುತ್ತಿದೆ ಎಂದು ವರದಿಯಾಗಿತ್ತು. ಆದರೆ ಆರ್ ಬಿಐ ಹಾಗೂ ವಿತ್ತ ಸಚಿವ ಅರುಣ್ ಜೇಟ್ಲಿ ಸ್ಪಷ್ಟನೆ ನೀಡಿದ್ದು ನೋಟು ಮುದ್ರಣ ಸಾಕಷ್ಟುಮಾಡಲಾಗಿದೆ. ನೋಟಿನ ಕೊರತೆಯಾಗಿಲ್ಲ ಎಂದಿದ್ದಾರೆ.


ಬಹುಶಃ ಸಾಗಣೆಗೆ ತೊಂದರೆಯಾಗಿ ಇಂತಹ ಸಮಸ್ಯೆಗಳಾಗುತ್ತಿರಬಹುದು ಎಂದು ಆರ್ ಬಿಐ ಸ್ಪಷ್ಟನೆ ನೀಡಿದೆ. ಈ ಸಮಸ್ಯೆಗೆ ಶೀಘ್ರದಲ್ಲೇ ಪರಿಹಾರ ಕಂಡುಕೊಳ್ಳಲಾಗುವುದು ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಭರವಸೆ ನೀಡಿದ್ದಾರೆ.


ಕರ್ನಾಟಕ, ಮಧ್ಯಪ್ರದೇಶ, ಉತ್ತರ ಪ್ರದೇಶ, ಆಂಧ್ರಪ್ರದೇಶ ಸೇರಿದಂತೆ ದೇಶದ ಕೆಲವೆಡೆ ಎಟಿಎಂಗಳಲ್ಲಿ ಹಣದ ಕೊರತೆ ಎದುರಾಗಿತ್ತು. ಇದಕ್ಕೆ ವಿಪಕ್ಷ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೂಡಾ ಕೇಂದ್ರದ ವಿರುದ್ಧ ಹರಿಹಾಯ್ದಿದ್ದರು.


ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.
ಇದರಲ್ಲಿ ಇನ್ನಷ್ಟು ಓದಿ :