ಬೆಂಗಳೂರು : ಮೊಬೈಲ್ ನ್ನು ಅತಿಯಾಗಿ ಬಳಸುವುದರಿಂದ ಅದರ ಬ್ಯಾಟರಿ ಚಾರ್ಜ್ ಹೆಚ್ಚು ಸಮಯ ಬರುವುದಿಲ್ಲ. ಇದರಿಂದ ಪದೇ ಪದೇ ಮೊಬೈಲ್ ಚಾರ್ಜ್ ಗೆ ಹಾಕಬೇಕಾಗುತ್ತದೆ. ಹೊರಗಡೆ ಹೋದಾಗ ಮೊಬೈಲ್ ಚಾರ್ಜ್ ಮಾಡಲು ಆಗುವುದಿಲ್ಲ. ಅದಕ್ಕಾಗಿ ಸಂಶೋಧಕರು ಬ್ಯಾಟರಿಯಿಲ್ಲದ ಮೊಬೈಲ್ ಫೋನ್ ವೊಂದನ್ನು ಕಂಡುಹಿಡಿದಿದ್ದಾರೆ. ಯುನಿವರ್ಸಿಟಿ ಆಫ್ ವಾಷಿಂಗ್ಟನ್ ಸಂಶೋಧಕರು ವಿದ್ಯುತ್ ಶಕ್ತಿಗೆ ಬದಲಾಗಿ ರೇಡಿಯೋ ಸಿಗ್ನಲ್, ಬೆಳಕಿಗೆ ಅಗತ್ಯವಿರುವ ಮೈಕ್ರೋವ್ಯಾಟ್ಗಳನ್ನು ಬಳಸಿಕೊಂಡು ಬ್ಯಾಟರಿ ರಹಿತವಾದ ಫೋನ್ ಅನ್ನು ಕಂಡುಹಿಡಿದಿದ್ದಾರೆ.