Widgets Magazine

ಬಿಡುಗಡೆಗೂ ಮುನ್ನವೆ ನೋಕಿಯಾ ಸಂಚಲನ

New Delhi| Rajendra| Last Modified ಗುರುವಾರ, 19 ಜನವರಿ 2017 (10:27 IST)
ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂನೊಂದಿಗೆ ಸ್ಮಾರ್ಟ್‌ಫೋನ್ ಕ್ಷೇತ್ರಕ್ಕೆ ಅಡಿಯಿಡುತ್ತಿರುವ ನೋಕಿಯಾ ಬಿಡುಗಡೆಗೂ ಮುನ್ನವೇ ಸಂಚಲನ ಸೃಷ್ಟಿಸಿದೆ. ಮೂರು ವರ್ಷಗಳ ಬಳಿಕ ಕಂಪೆನಿ ಬಿಡುಗಡೆ ಮಾಡುತ್ತಿರುವ ಬಿಡುಗಡೆಗೆ ವೇದಿಗೆ ಸಿದ್ಧವಾಗಿದೆ.

ಇದೇ ಜನವರಿ 19ರಿಂದ ಚೀನಾದಲ್ಲಿ ಬಿಡುಗಡೆಯಾಗಲಿದ್ದು, ಇದನ್ನು ಕೊಳ್ಳಲು ಈಗಾಗಲೆ 10 ಲಕ್ಷಕ್ಕೂ ಅಧಿಕ ಮಂದಿ ನೋಂದಾಯಿಸಿಕೊಂಡಿದ್ದಾರೆ. ಜೆಡಿ.ಕಾಮ್‍ನಲ್ಲಿ ಫ್ಲಾಶ್‌ಸೇಲ್‌ನಡಿ ಇವನ್ನು ಮಾರಾಟಕ್ಕೆ ಇಡಲಾಗಿದೆ. ಆ ದಿನ ಎಷ್ಟು ಫೋನ್‌ಗಳನ್ನು ಮಾರಾಟಕ್ಕೆ ಇಡಲಾಗುತ್ತದೆ ಎಂಬುದನ್ನು ಕಂಪೆನಿ ತಿಳಿಸಿಲ್ಲ.

ಫೊನ್ ಬಿಡುಗಡೆ ಮಾಡಲಾಗುತ್ತಿದೆ ಎಂದು ಘೋಷಿಸಿದ 24 ಗಂಟೆಗಳಲ್ಲೇ 2.5 ಲಕ್ಷ ಮಂದಿ ರಿಜಿಸ್ಟರ್ ಮಾಡಿಕೊಂಡಿರುವುದು ವಿಶೇಷ. ಅತ್ಯಾಧುನಿಕ ಸೌಲಭ್ಯಗಳೊಂದಿಗೆ ಬರುತ್ತಿರುವ ಇದರ ಬೆಲೆ ರೂ.17,000 ಎನ್ನಲಾಗಿದೆ. ಈ ವರ್ಷ ಏಪ್ರಿಲ್‌‍ನಲ್ಲಿ ಭಾರತ ಮಾರುಕಟ್ಟೆಗೆ ಪ್ರವೇಶಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.



ಇದರಲ್ಲಿ ಇನ್ನಷ್ಟು ಓದಿ :