Widgets Magazine

ಟಿಕ್ ​ಟಾಕ್​ ಮತ್ತು ಹೆಲೋ ಆ್ಯಪ್ ಬ್ಯಾನ್ ಮಾಡುವಂತೆ ಕೇಂದ್ರ ಸರ್ಕಾರದಿಂದ ನೋಟಿಸ್​ ಜಾರಿ

ನವದೆಹಲಿ| pavithra| Last Updated: ಶನಿವಾರ, 20 ಜುಲೈ 2019 (08:04 IST)
ನವದೆಹಲಿ : ಚೀನಾದ ಜನಪ್ರಿಯ ಆ್ಯಪ್​​ ಗಳಾದ ಟಿಕ್ ​ಟಾಕ್​ ಮತ್ತು ಹಲೋ ಆ್ಯಪ್ ಗಳನ್ನು ದೇಶ ವಿರೋಧಿ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಹಿನ್ನಲೆಯಲ್ಲಿ ನೋಟಿಸ್​ ನೀಡಿದೆ.




ಈ ಹಿಂದೆ ದೇಶ ವಿರೋಧಿ ಚಟುವಟಿಕೆಗಳಿಗೆ ಈ ಆ್ಯಪ್ ​ಗಳು ಬಳಕೆಯಾಗುತ್ತಿದೆ ಎಂಬ ಕಾರಣಕ್ಕೆ ಟಿಕ್​ಟಾಕ್​​ ಮತ್ತು ಹಲೋ ಆ್ಯಪ್ ಸಂಸ್ಥೆಗಳಿಗೆ ಸ್ವದೇಶಿ ಜಾಗರಣ ಮಂಚ್​  ಹಾಗೂ ಎಲೆಕ್ಟ್ರಾನಿಕ್ಸ್​ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಜುಲೈ 22 ರೊಳಗೆ ಬ್ಯಾನ್ ಮಾಡುವಂತೆ ಗಡುವು ನೀಡಿದ್ದು, ಅದರೊಳಗೆ ಪ್ರತಿಕ್ರಿಯೆ ನೀಡದಿದ್ದರೆ ಈ ಆಯಪ್​ ಗಳ ಮೇಲೆ ನಿಷೇಧ ಹೇರುವ ಎಚ್ಚರಿಕೆಯನ್ನು ನೀಡಿ ನೋಟೀಸ್​ ಜಾರಿ ಮಾಡಿತ್ತು. .


ಇದೀಗ ಕೇಂದ್ರ ಸರ್ಕಾರ ಕೂಡ ನೋಟಿಸ್ ನೀಡಿದ್ದು, ಈ ನೋಟಿಸ್​ ನ್ನು ಗಂಭೀರವಾಗಿ ಪರಿಗಣಿಸಿದ ಟಿಕ್​ಟಾಕ್​ ಮತ್ತು ಹಲೋ ಆ್ಯಪ್ ಸಂಸ್ಥೆ ಕೇಂದ್ರ ಸರ್ಕಾರ ನೀಡಿದ ದೂರಿಗೆ ಸ್ಪಂದಿಸುತ್ತೇವೆ ಎಂದು ತಿಳಿಸಿವೆ. ಕಳೆದ ಎಪ್ರಿಲ್​ ತಿಂಗಳಿನಲ್ಲಿ ಟಿಕ್​ಟಾಕ್​ ಆ್ಯಪ್ ಕುರಿತು ಮದ್ರಾಸ್​ ಹೈಕೋರ್ಟ್​ ನಿಷೇಧ ಹೇರಿತ್ತು. ಬಳಿಕ ನಿಷೇಧವನ್ನು ಹಿಂಪಡೆದಿತ್ತು.



 


ಇದರಲ್ಲಿ ಇನ್ನಷ್ಟು ಓದಿ :