Widgets Magazine

ಒರಾಯನ್ ಈಸ್ಟ್ ಮಾಲ್‍ನಲ್ಲಿ ಸೇನಾ ದಿನಾಚರಣೆ

Bangalore| Rajendra| Last Modified ಶುಕ್ರವಾರ, 20 ಜನವರಿ 2017 (14:05 IST)
ಒರಾಯನ್ ಈಸ್ಟ್ ಮಾಲ್‍ನಲ್ಲಿ ಅದ್ಧೂರಿಯಾಗಿ ಸೇನಾ ದಿನವನ್ನು ಆಚರಿಸಲಾಯಿತು. ಈ ಸೇನಾ ದಿನದ ಅಂಗವಾಗಿ ಮಾಲ್‍ನಲ್ಲಿ ಭಾರತೀಯ ಸೇನೆಯ ಪ್ಯಾರಾ ರೆಜಿಮೆಂಟ್‍ನ ಯೋಧರು ಬಳಸುವ ಹಲವಾರು ಯುದ್ಧ ಸಾಮಗ್ರಿಗಳನ್ನು ಪ್ರದರ್ಶನಕ್ಕೆ ಇಡಲಾಗಿದೆ.

ರೆಜಿಮೆಂಟ್‍ನ ಸೈನಿಕರು ಹಲವಾರು ವಾದ್ಯಗಳ ಮೂಲಕ ಹರಿಸಿದ ಸಂಗೀತದ ಹೊನಲಿಗೆ ಪ್ರೇಕ್ಷಕರು ತಲೆದೂಗಿದರು. ಕಾರ್ನೆಟ್, ಸ್ನೇರ್ ಡ್ರಮ್ಸ್, ಬಾಸ್ ಡ್ರಮ್ಸ್, ಸಿಂಬಲ್ಸ್, ಹಾನ್ರ್ಸ್, ಸ್ಯಾಕ್ಸೋಫೋನ್, ಬಾಸೂನ್ಸ್, ಕ್ಲಾರಿನೆಟ್ಸ್ ಸೇರಿದಂತೆ ಹಲವಾರು ವಾದ್ಯಗಳನ್ನು ನುಡಿಸುವ ಮೂಲಕ ಪ್ರೇಕ್ಷಕರನ್ನು ಮಂತ್ರಮುಗ್ಧಗೊಳಿಸಿದರು.​

ಬ್ರಿಗೇಡ್ ಗ್ರೂಪ್ ನ ಬ್ರಿಗೇಡ್ ಗೇಟ್ ವೇ ಎನ್ ಕ್ಲೇವ್ ಭಾಗವಾಗಿರುವ ಒರಾಯನ್ ಮಾಲ್, ಹಬ್ಬಹರಿದಿನಗಳು, ವಿಶೇಷ ಸಂದರ್ಭ ಸೇರಿದಂತೆ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :