Widgets Magazine

ಟೊಮೆಟೊ ಬೆಲೆ ಹೆಚ್ಚಲು ಕಾರಣ ಭಾರತ ವಿರೋಧಿ ನೀತಿ ಎಂದ ಪಾಕ್

ನವದೆಹಲಿ| Krishnaveni| Last Modified ಶನಿವಾರ, 28 ಅಕ್ಟೋಬರ್ 2017 (09:59 IST)
ನವದೆಹಲಿ: ಪಾಕಿಸ್ತಾನದ ಲಾಹೋರ್ ನಲ್ಲಿ ಈಗ ಹೋಗಿ ಟೊಮೆಟೋ ಬೆಲೆ ಕೇಳಿದರೆ ಹೌಹಾರುತ್ತೀರಿ. ಅಲ್ಲಿ ಇದೀಗ ಒಂದು ಕೆಜಿ ಟೊಮೆಟೋ ಬೆಲೆ 300 ಕ್ಕೆ ತಲುಪಿದೆ!

 
ಇದಕ್ಕೆ ಕಾರಣ ರಾಜಕಾರಣಿಗಳ ಭಾರತ ವಿರೋಧಿ ನೀತಿ ಎಂದು ಅಲ್ಲಿನ ಪತ್ರಿಕೆಯೊಂದು ದೂರಿದೆ.  ಭಾರತದಿಂದ ಅಗತ್ಯ ವಸ್ತುಗಳ ಆಮದು ಮಾಡಿಕೊಳ್ಳುವುದಕ್ಕೆ ನಿಷೇಧ ಹೇರಿರುವುದೇ ಈ ಬೆಲೆ ಹೆಚ್ಚಳಕ್ಕೆ ಕಾರಣ ಎಂದು ಪಾಕ್ ಪತ್ರಿಕೆ ಆರೋಪಿಸಿದೆ.
 
ನಮ್ಮ ರೈತರಿಗೆ ಪ್ರೋತ್ಸಾಹ ಕೊಡುವುದರ ಬದಲು ವಿದೇಶೀ ರೈತರನ್ನು ಯಾಕೆ ಉದ್ದಾರ ಮಾಡಬೇಕೆಂದು ಪಾಕ್ ರಾಜಕಾರಣಿಗಳು ಮೂರ್ಖತನದ ನಿರ್ಧಾರ ಮಾಡಿದರು. ಇದರಿಂದಾಗಿ ಇಂದು ಭಾರತದಿಂದ ಟೊಮೆಟೋದಂತಹ ಅಗತ್ಯ ವಸ್ತುಗಳು ಆಮದಾಗುತ್ತಿಲ್ಲ. ಇಲ್ಲಿನ ಬೆಳೆ ಸಾಕಾಗುತ್ತಿಲ್ಲ. ಹೀಗಾಗಿ ಬೆಲೆ ಹೆಚ್ಚಳವಾಗಿದೆ ಎಂದು ಪತ್ರಿಕೆ ಆರೋಪಿಸಿದೆ. 
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿಇದರಲ್ಲಿ ಇನ್ನಷ್ಟು ಓದಿ :