Widgets Magazine

ಪ್ಯಾನಾಸೋನಿಕ್‌ನಿಂದ ಹೊಸ ಟಫ್‌ಬ್ಯಾಡ್ಸ್

New Delhi| Rajendra| Last Modified ಬುಧವಾರ, 22 ಫೆಬ್ರವರಿ 2017 (11:02 IST)
ಪ್ರಮುಖ ತಂತ್ರಜ್ಞಾನ ಕಂಪೆನಿ ಪ್ಯಾನಾಸೋನಿಕ್ ಟಫ್ ಪ್ಯಾಡ್ ವಿಭಾಗದಲ್ಲಿ ಮತ್ತೆ ಹೊಸ 3 ಮಾಡೆಲ್‌ಗಳನ್ನು ಭಾರತದ ಮಾರುಕಟ್ಟೆಗೆ ರಿಲೀಸ್ ಮಾಡಿದೆ. ಇವುಗಳಲ್ಲಿ ಎರಡು 4.7 ಇಂಚು ಮಾಡೆಲ್‌ಗಳಾದರೆ, ಇನ್ನೊಂದು 10.1 ಇಂಚಿನ ಟ್ಯಾಬ್ಲೆಟ್. ಬೆಲೆ ರೂ.99,000ರಿಂದ ಆರಂಭವಾಗಿ ರೂ.1.2 ಲಕ್ಷಗಳವರೆಗೂ ಇದೆ.

ಎಲ್ಲಾ ಮಾಡೆಲ್‌ಗಳನ್ನು ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ವಿನ್ಯಾಸ ಮಾಡಿಕೊಡಲಾಗುತ್ತದೆ. ಎಲ್ಲಾ ಕಠಿಣ ವಾತಾವರಣ ಪರಿಸ್ಥಿತಿಗಳನ್ನು ತಡೆದುಕೊಳ್ಳುವ ಈ ಉಪಕರಣಗಳು ಸಾರಿಗೆ, ತಯಾರಿ, ವಾಹನ, ರೀಟೇಲ್, ಆರೋಗ್ಯ ಸೇವಾ ಕ್ಷೇತ್ರಕ್ಕೆ ಉಪಯುಕ್ತ ಎಂದು ಕಂಪೆನಿ ತಿಳಿಸಿದೆ.

ಟಫ್‌ಪ್ಯಾಡ್ ವಿಭಾಗದಲ್ಲಿ 12 ಮಾಡೆಲ್‌ಗಳವರೆಗೂ ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದೇವೆಂದು ಕಂಪೆನಿ ಸಿಸ್ಟಂ, ಸಲ್ಯೂಷನ್ಸ್ ಬಿಜಿನೆಸ್ ಸಹಾಯಕ ನಿರ್ದೇಶಕ ವಿಜಯ್ ವಾಧ್ವಾನ್ ತಿಳಿಸಿದ್ದಾರೆ. ಉತ್ತರಪ್ರದೇಶ ಮತ್ತು ಬೆಂಗಳೂರು ಪೊಲೀಸ್ ಇಲಾಖೆ ಟಫ್‌ಪ್ಯಾಡ್‌ಗಳನ್ನು ಬಳಸುತ್ತಿದೆ ಎಂದಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್
ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :