ನವದೆಹಲಿ : ಈ ಹಿಂದೆ ಬಿಡುಗಡೆಗೊಂಡು ನಂತರ ಹಿಂಪಡೆದ ಪತಂಜಲಿ ಸಮೂಹದ ಕಿಂಭೋ ಸಂವಹನ ಆ್ಯಪ್ ಅನ್ನು ಇದೇ ಆಗಸ್ಟ್ 27ರಂದು ಅಧಿಕೃತವಾಗಿ ಮತ್ತೆ ಬಿಡುಗಡೆಯಾಗಲಿರುವುದಾಗಿ ಪತಂಜಲಿ ಸಮೂಹದ ಕಾರ್ಯಾನಿರ್ವಹಕ ನಿರ್ದೇಶಕ ಅಚಾರ್ಯ ಬಾಲಕೃಷ್ಣ ತಿಳಿಸಿದ್ದಾರೆ. ಸುಮಾರು 2 ತಿಂಗಳ ಹಿಂದೆ ಕಿಂಭೋ ಆಪ್ ನ್ನು ಪ್ಲೇಸ್ಟೋರ್ ನಲ್ಲಿ ಬಿಡುಗಡೆ ಮಾಡಲಾಗಿತ್ತು. ಬಿಡುಗಡೆಗೊಂಡ ಮೊದಲ 3 ಗಂಟೆಗಳಲ್ಲೇ 1.5 ಲಕ್ಷಕ್ಕೂ ಅಧಿಕ ಜನರು ಈ ಆ್ಯಪನ್ನು ಡೌನ್ ಲೋಡ್ ಮಾಡಿಕೊಂಡಿದ್ದರು.