Widgets Magazine

ಮತ್ತೆ ಪೆಟ್ರೋಲ್, ಡೀಸೆಲ್ ದರ ಏರಿಕೆ

petrol
ನವದೆಹಲಿ| Rajesh patil| Last Modified ಭಾನುವಾರ, 16 ಏಪ್ರಿಲ್ 2017 (11:40 IST)
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ದರ ಏರಿಕೆಯಾದ ಹಿನ್ನೆಲೆಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 1.39 ರೂ. ಡೀಸೆಲ್ ದರದಲ್ಲಿ 1.04 ರೂ ದರ ಹೆಚ್ಚಳಗೊಳಿಸಲಾಗಿದೆ.

ರಾಜ್ಯ ಸರಕಾರದ ತೆರಿಗೆ ಹೊರತುಪಡಿಸಿ ಪ್ರತಿ ಲೀಟರ್ ಪೆಟ್ರೋಲ್ ದರದಲ್ಲಿ 1.39 ರೂಪಾಯಿ ಹೆಚ್ಚಳಗೊಳಿಸಲಾಗಿದ್ದು, ಡೀಸೆಲ್ ದರದಲ್ಲಿ 1.04 ರೂ ಹೆಚ್ಚಳಮಾಡಲಾಗಿದೆ ಎಂದು ದೇಶದ ಬೃಹತ್ ತೈಲ ಸಂಸ್ಥೆಯಾದ ಇಂಡಿಯನ್ ಆಯಿಲ್ ಕಾರ್ಪೋರೇಶನ್‌ ಹೇಳಿಕೆ ನೀಡಿದೆ

ಪೆಟ್ರೋಲ್ ಮತ್ತು ಡೀಸೆಲ್ ದರ ಹೆಚ್ಚಳದಿಂದಾಗಿ ದೆಹಲಿಯಲ್ಲಿ ಪ್ರತಿ ಲೀಟರ್ 66.29 ರೂಪಾಯಿಗಳಿಗೆ ತಲುಪಿದ್ದರೆ, ಡೀಸೆಲ್ ದರ 55.61 ರೂಪಾಯಿಗಳಿಗೆ ಏರಿಕೆಯಾಗಿದೆ.

ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಎದುರಿಗೆ ರೂಪಾಯಿ ಮೌಲ್ಯದಲ್ಲಿ ಕುಸಿತ ಮತ್ತು ಕಚ್ಚಾ ತೈಲ ದರ ಹೆಚ್ಚಳದಿಂದಾಗಿ ಪೆಟ್ರೋಲ್ ಮತ್ತು ಡೀಸೆಲ್ ದರದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಶನ್ ತಿಳಿಸಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.ಇದರಲ್ಲಿ ಇನ್ನಷ್ಟು ಓದಿ :