ನಾಳೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿನಿತ್ಯ ಬದಲಾವಣೆಯಾಗುತ್ತದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬದಲಾವಣೆ ಆಧರಿಸಿ ನಿತ್ಯ ಬೆಲೆ ಪರಿಷ್ಕರಣೆ ಮಾಡಲು ತೈಲ ಕಂಪನಿಗಳು ನಿರ್ಧರಿಸಿದ್ದು, ನಾಳೆಯಿಂದ ಜಾರಿಗೆ ಬರಲಿದೆ. ಈ ಹಿಂದೆ 5 ನಗರಗಳಲ್ಲಿ ನಿತ್ಯ ಪೆಟ್ರೋಲ್, ಡೀಸೆಲ್ ಬೆಲೆ ಪರಿಷ್ಕರಣೆಯನ್ನ ಪ್ರಾಯೋಗಿಕವಾಗಿ ಜಾರಿಗೊಳಿಸಲಾಗಿತ್ತು. ಆ ಪ್ರಯೋಗ ಯಶಸ್ಸು ಕಂಡಿದ್ದರಿಂದ ದೇಶಾದ್ಯಂತ ಬೆಲೆ ಪರಿಷ್ಕರಣೆಗೆ ತೈಲ ಕಂಪನಿಗಳು ನಿರ್ಧರಿಸಿವೆ. ಇದರನ್ವಯ ಮಧ್ಯರಾತ್ರಿ ಬದಲು ಬೆಳಗ್ಗೆ 6